ತೀರ್ಥಹಳ್ಳಿ: ಇಲ್ಲಿನ ಶ್ರೀ ಜಯಚಾಮರಾಜೇಂದ್ರ ತಾಲೂಕು ಆಸ್ಪತ್ರೆಯಲ್ಲಿ ಬಡ ರೋಗಿಗಳ ಅನುಕೂಲಕ್ಕಾಗಿ ಉಚಿತ ಫ್ಯಾನ್‌ಗಳ ವಿತರಣೆ

Posted by

ತೀರ್ಥಹಳ್ಳಿ: ಇಲ್ಲಿನ ಶ್ರೀ ಜಯಚಾಮರಾಜೇಂದ್ರ ತಾಲೂಕು ಆಸ್ಪತ್ರೆಯಲ್ಲಿ ಬಡ ರೋಗಿಗಳ ಅನುಕೂಲಕ್ಕಾಗಿ ಉಚಿತ ಫ್ಯಾನ್‌ಗಳ ವಿತರಣೆ ಕಾರ್ಯಕ್ರಮವು ನಡೆಯಿತು.

ಜಯ ಕರ್ನಾಟಕ ಸಂಘಟನೆ ತೀರ್ಥಹಳ್ಳಿ ಅಧ್ಯಕ್ಷರು ಹಾಗೂ ಆರೋಗ್ಯ ರಕ್ಷಾ ಸಮಿತಿ ಸದಸ್ಯರಾದ ಕುರುವಳ್ಳಿ ನಾಗರಾಜ್ ಅವರ ಮನವಿ ಮೇರೆಗೆ, ನಮದುರ್ಗ ಬಸ್ ಸರ್ವೀಸ್ ಮಾಲಿಕರಾದ ಅಭಿಷೇಕ್ ಶಣೈ ಮತ್ತು ಅಭಿನಂದನ್ ಶಣೈ ಅವರುಗಳು ತಮ್ಮ ಪೋಷಕರಾದ ದಿವಂಗತ ಗೀತಾ ಗಣೇಶ ಶಣೈ ಅವರ ಸ್ಮರಣಾರ್ಥವಾಗಿ ಆಸ್ಪತ್ರೆಯ ವಾರ್ಡುಗಳಿಗೆ ಫ್ಯಾನ್‌ಗಳನ್ನು ಉಚಿತವಾಗಿ

ನೀಡಿದರು.ಕಾರ್ಯಕ್ರಮವು ಆಸ್ಪತ್ರೆಯ ಸಭಾಂಗಣದಲ್ಲಿ ಡಾ. ಅರ್ವಿಂದ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಮುಖ್ಯ ಅತಿಥಿಗಳಾಗಿ ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷರು ಹಾಗೂ ಹಾಲಿ ಸದಸ್ಯರಾದ ಸುಷೀಲಾ ಶೆಟ್ಟಿ, ಪಟ್ಟಣ ಪಂಚಾಯಿತಿ ಸದಸ್ಯರಾದ ಮಂಜುಳ ನಾಗೇಂದ್ರ ಹಾಗೂ ಆರೋಗ್ಯ ರಕ್ಷಾ ಸಮಿತಿಯ ಸದಸ್ಯರಾದ ಶ್ರೇಯಸ್ ರಾವ್, ವಾಸುದೇವ ಕಾಮತ್, ಪೂರ್ಣಿಮಾ ಶ್ರೀನಿವಾಸ್ ಉಪಸ್ಥಿತರಿದ್ದರು.ಇದೇ ವೇಳೆ ಸಂಘಟನೆಯ ಕಾರ್ಯಕರ್ತರಾದ ಬೆಟ್ಟಮಕ್ಕಿ ಶ್ರೀಕಾಂತ್, ಅಂಜನ್ ಹೆಗ್ಡೆ, ಅರ್ಜುನ್ ಗೌಡ (ಮಾಳೂರು), ಮೇಗರವಳ್ಳಿ ಕವಿರಾಜ್, ಮಹೇಶ್ ಬೆಟ್ಟಮಕ್ಕಿ, ಸನತ್ ಗೌಡ (ಯಡುರು), ಸುಶಾಂತ್ ಮೊಗವೀರ (ಮಿಲ್ಕೇರಿ), ರಾಜೇಶ್ ಮೊಗವೀರ ಸೇರಿದಂತೆ ಹಲವರು ಭಾಗವಹಿಸಿದರು.ಈ ಸಂದರ್ಭದಲ್ಲಿ ಕುರುವಳ್ಳಿ ನಾಗರಾಜ್ ಅವರು ಮಾತನಾಡಿ, ಅಭಿಷೇಕ್ ಶಣೈ ಹಾಗೂ ಅಭಿನಂದನ್ ಶಣೈ ಅವರ ಕುಟುಂಬದವರು ತಮ್ಮ ಪೋಷಕರ ಸ್ಮರಣಾರ್ಥವಾಗಿ ಸರ್ಕಾರಿ ಆಸ್ಪತ್ರೆಗೆ ಫ್ಯಾನ್‌ಗಳನ್ನು ನೀಡಿದರೂ, ಕಾರ್ಯಕ್ರಮದಲ್ಲಿ ಭಾಗವಹಿಸದೇ ತಮ್ಮ ಸೇವೆಯನ್ನು ಮೌನವಾಗಿ ಸಲ್ಲಿಸುವುದನ್ನು ಇಷ್ಟಪಡುತ್ತಾರೆ ಎಂದು ತಿಳಿಸಿದರು. ಸಾರ್ವಜನಿಕ ಸೇವೆಯೇ ಮುಖ್ಯ ಎಂಬ ಅವರ ಮನೋಭಾವವನ್ನು ಅವರು ಪ್ರಶಂಸಿಸಿದರು.ಈ ಸೇವಾ ಕಾರ್ಯವು ಆಸ್ಪತ್ರೆಯ ರೋಗಿಗಳಿಗೆ ಹೆಚ್ಚಿನ ಸೌಲಭ್ಯ ಒದಗಿಸುವುದರ ಜೊತೆಗೆ ಸಮಾಜಮುಖಿ ಕಾರ್ಯಗಳಿಗೆ ಪ್ರೇರಣೆಯಾಗಲಿದೆ ಎಂದು ಕಾರ್ಯಕ್ರಮದಲ್ಲಿ ಅಭಿಪ್ರಾಯ ವ್ಯಕ್ತವಾಯಿತು.

ವರದಿ : ಗಣೇಶ್ ರಿಪ್ಪನ್ ಪೇಟೆ

Leave a Reply

Your email address will not be published. Required fields are marked *