ರಿಪ್ಪನ್ ಪೇಟೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಶ್ರೀರಾಮನಗರದಲ್ಲಿ ಚರಂಡಿ ಮುಚ್ಚಿ ಹೋಗಿರುವುದರಿಂದ ನೀರು ಸರಿಯಾಗಿ ಹರಿಯದೆ ಚಂದ್ರು ಪುರುಷೋತ್ತಮ್ ಅವರ ಮನೆಯ ಮುಂದೆ ಸಂಗ್ರಹವಾಗಿ ಅವರ ತೋಟಕ್ಕೆ ಹಾಗೂ ಸಮೀಪದ ಪ್ರದೇಶಗಳಿಗೆ ಹರಿಯುತ್ತಿದೆ. ಈ ನೀರಿನ ಜೊತೆಗೆ ನಾಲ್ಕೈದು ಮನೆಗಳ ಬೆಚ್ಚಲು ನೀರು ಕೂಡ ಸೇರಿ ಹರಿದು ತೊಂದರೆ ಉಂಟುಮಾಡುತ್ತಿದೆ.ಚರಂಡಿಯನ್ನು ಸ್ವಚ್ಛಗೊಳಿಸದ ಕಾರಣ ಅವರ ಮನೆಯ ಆವರಣದಲ್ಲಿ ಅಸ್ವಚ್ಛ ಪರಿಸ್ಥಿತಿ ನಿರ್ಮಾಣಗೊಂಡಿದ್ದು, ಬಾಟಲಿ, ಬಕೆಟ್, ಚಪ್ಪಲಿ, ಬಲ್ಪು ಸೇರಿದಂತೆ ವಿವಿಧ ಕಸದ ವಸ್ತುಗಳು ಕೂಡಿಕೊಂಡು ಮನೆ ಸುತ್ತಮುತ್ತಲಿನ ಪರಿಸರ ಹಾಳಾಗಿದೆ. ಇದರಿಂದ ದುರ್ವಾಸನೆ ಉಂಟಾಗಿ ಗ್ರಾಮದಲ್ಲಿ ರೋಗಗಳು ಹರಡುವ ಭೀತಿ ಕೂಡ ಹೆಚ್ಚಾಗಿದೆ.ಕಳೆದ ಹಲವು ವರ್ಷಗಳಿಂದ ಈ ಸಮಸ್ಯೆ ಮುಂದುವರಿದಿದ್ದರೂ ಗ್ರಾಮ ಪಂಚಾಯ್ತಿ ಯಾವುದೇ ಕ್ರಮ ಕೈಗೊಂಡಿಲ್ಲ ಎಂಬುದು ಸ್ಥಳೀಯರ ಆರೋಪವಾಗಿದೆ. ಈ ಕುರಿತು ಮಂಡಲ ಪಂಚಾಯ್ತಿಯ ಅಧಿಕಾರಿಗಳಿಗೆ ವಿಷಯವನ್ನು ಮೌಖಿಕವಾಗಿ ಹಲವು ಬಾರಿ ತಿಳಿಸಿದರೂ, “ಎರಡು ದಿನಗಳಲ್ಲಿ ಸರಿಪಡಿಸುತ್ತೇವೆ” ಎಂದು ಹೇಳಿ ವಾರಗಳಾದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಚಂದ್ರು ಪುರುಷೋತ್ತಮ್ ಅವರು ತಿಳಿಸಿದ್ದಾರೆ.ಅಧಿಕಾರಿಗಳು ಸಮಸ್ಯೆಯನ್ನು ಕಡೆಗಣಿಸುತ್ತಿರುವುದು ಸ್ಥಳೀಯರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಚರಂಡಿಯನ್ನು ಸ್ವಚ್ಛಗೊಳಿಸಿ ಈ ಸಮಸ್ಯೆಯನ್ನು ಶೀಘ್ರದಲ್ಲೇ ಪರಿಹರಿಸಬೇಕೆಂದು ಚಂದ್ರು ಪುರುಷೋತ್ತಮ್ ಅವರು ಆಗ್ರಹಿಸಿದ್ದಾರೆ.

ವರದಿ : ಕೆರೆಹಳ್ಳಿ ಅಂಜನ್

By Anjan Kerehalli

ಮಲ್ನಾಡ್ ಸುದ್ದಿ ಎಕ್ಸ್ಪ್ರೆಸ್ – ನಮ್ಮ ಧ್ವನಿ, ನಿಮ್ಮ ಹಕ್ಕು ಮಲ್ಲಾಡ್ ಸುದ್ದಿ ಎಕ್ಸ್ಪ್ರೆಸ್ ದು ಮಲೆನಾಡ ಜನರ ಧ್ವನಿ “ನಮ್ಮ ಮಲ್ನಾಡ್ ಸುದ್ದಿ ಎಕ್ಸ್ಪ್ರೆಸ್ – ಜನರೊಂದಿಗೆ, ಜನರಿಗಾಗಿ.”

Leave a Reply

Your email address will not be published. Required fields are marked *