ತೀರ್ಥಹಳ್ಳಿ : ಪಟ್ಟಣದ ಶಾಂತವೇರಿ ಗೋಪಾಲಗೌಡ ರಂಗ ಮಂದಿರದಲ್ಲಿ ಇಂದು ನಡೆದ ಅಂತರಜಿಲ್ಲಾ ಜಾನಪದ ನೃತ್ಯ ಸ್ಪರ್ಧೆಯಲ್ಲಿ ಹೊಸನಗರ ಒಕ್ಕಲಿಗ ಮಹಿಳಾ ತಂಡ ಮೂರನೇ ಬಹುಮಾನ ಪಡೆದು ಗಮನ ಸೆಳೆದಿದೆ.ಹೊಸನಗರದಿಂದ ಭಾಗವಹಿಸಿದ್ದ ತಂಡದ ಸದಸ್ಯರಾದ ಜ್ಯೋತಿ ಪೂರ್ಣೇಶ್, ರೇಷ್ಮಾ ಹರೀಶ್, ರೇಖಾ ಹರೀಶ್, ರಕ್ಷಿತಾ ಸುಂದರೇಶ್, ಪೃಥ್ವಿ ಕೃಷ್ಣಮೂರ್ತಿ, ಚಿತ್ರ ಧನಂಜಯ್ ಹಾಗೂ ಪ್ರಕೃತಿ ಕೃಷ್ಣಮೂರ್ತಿ ಅವರ ಸಮೂಹ ನೃತ್ಯ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು.

ಇವರ ಸಮನ್ವಯ, ಸಾಂಪ್ರದಾಯಿಕ ಉಡುಗೆ ಹಾಗೂ ಜಾನಪದ ಶೈಲಿಯ ಪ್ರಸ್ತುತಿ ತೀರ್ಪುಗಾರರ ಮನಗೆದ್ದಿತು.ಈ ಸ್ಪರ್ಧೆಯಲ್ಲಿ ಒಟ್ಟು ಎಂಟು ತಂಡಗಳು ಭಾಗವಹಿಸಿದ್ದವು. ಸಕಲೇಶಪುರ, ಕೊಪ್ಪ, ತರೀಕೆರೆ, ತೀರ್ಥಹಳ್ಳಿ, ಹೊಸನಗರ ಹಾಗೂ ಕಮ್ಮರಡಿ ಸೇರಿದಂತೆ ವಿವಿಧ ಭಾಗಗಳಿಂದ ಆಗಮಿಸಿದ್ದ ತಂಡಗಳ ನಡುವೆ ತೀವ್ರ ಪೈಪೋಟಿ ನಡೆಯಿತು.ಕಠಿಣ ಸ್ಪರ್ಧೆಯ ನಡುವೆಯೂ ಹೊಸನಗರ ಒಕ್ಕಲಿಗ ಮಹಿಳಾ ತಂಡ ತಮ್ಮ ವಿಶಿಷ್ಟ ಜಾನಪದ ನೃತ್ಯ ಪ್ರದರ್ಶನದ ಮೂಲಕ ಮೂರನೇ ಬಹುಮಾನ ಪಡೆದು ಹೊಸನಗರಕ್ಕೆ ಕೀರ್ತಿ ತಂದಿದೆ.

ವರದಿ : ವಿಠಲ್ ರಾವ್

By Anjan Kerehalli

ಮಲ್ನಾಡ್ ಸುದ್ದಿ ಎಕ್ಸ್ಪ್ರೆಸ್ – ನಮ್ಮ ಧ್ವನಿ, ನಿಮ್ಮ ಹಕ್ಕು ಮಲ್ಲಾಡ್ ಸುದ್ದಿ ಎಕ್ಸ್ಪ್ರೆಸ್ ದು ಮಲೆನಾಡ ಜನರ ಧ್ವನಿ “ನಮ್ಮ ಮಲ್ನಾಡ್ ಸುದ್ದಿ ಎಕ್ಸ್ಪ್ರೆಸ್ – ಜನರೊಂದಿಗೆ, ಜನರಿಗಾಗಿ.”

Leave a Reply

Your email address will not be published. Required fields are marked *