ಕಳ್ಳತನ ಮಾಡಿದ ಆರೋಪಿಯನ್ನು ಹೆಡೆ ಮುರಿ ಕಟ್ಟಿದ ಆನಂದಪುರ ಪೊಲೀಸರು

ಸಾಗರ ತಾಲ್ಲೂಕಿನ ಬ್ರಾಹ್ಮಣ ಮಂಚಾಲೆ ಗ್ರಾಮದಲ್ಲಿ ನಡೆದ ಮನೆ ಕಳ್ಳತನ ಪ್ರಕರಣವನ್ನು ಆನಂದಪುರ ಪೊಲೀಸರು ಯಶಸ್ವಿಯಾಗಿ ಭೇದಿಸಿ ಆರೋಪಿಯನ್ನು ಬಂಧಿಸಿದ್ದಾರೆ.ದಿನಾಂಕ 19/02/2026 ರಂದು ಮಧ್ಯಾಹ್ನ 3.00 ಗಂಟೆಯಿಂದ 20/02/2026 ಬೆಳಿಗ್ಗೆ 8.00 ಗಂಟೆಯ ನಡುವಿನ ಅವಧಿಯಲ್ಲಿ ಗ್ರಾಮದ ಶ್ರೀಮತಿ ನಾಗರತ್ನ ಅವರ ಮನೆಯಲ್ಲಿ ಕಳ್ಳತನ ನಡೆದಿತ್ತು. ಕಳ್ಳರು ಮನೆಯ ಮುಂಭಾಗದ ಬಾಗಿಲು ಮುರಿದು ಒಳನುಗ್ಗಿ ಸುಮಾರು 8½ ಗ್ರಾಂ ತೂಕದ ಬಂಗಾರದ ಆಭರಣಗಳು (ಅಂದಾಜು ರೂ.70,000 ಮೌಲ್ಯ) ಹಾಗೂ ರೂ.7,000 ನಗದು ಹಣವನ್ನು ಕಳವು ಮಾಡಿದ್ದರು. ಈ ಸಂಬಂಧ ಠಾಣೆಯಲ್ಲಿ ಗುನ್ನೆ ನಂ.29/2026ರಡಿ ಬಿ.ಎನ್.ಎಸ್ ಕಲಂ 333(1), 331(4), 305 ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.ಪ್ರಕರಣದ ತನಿಖೆ ನಡೆಯುತ್ತಿದ್ದ ವೇಳೆ, ಅದೇ ಗ್ರಾಮದಲ್ಲಿ ಮತ್ತೊಂದು ಕಳ್ಳತನಕ್ಕೆ ಯತ್ನಿಸುತ್ತಿದ್ದ ವ್ಯಕ್ತಿಯನ್ನು ಗ್ರಾಮಸ್ಥರು ಹಿಡಿದು ಪೊಲೀಸರಿಗೆ ಒಪ್ಪಿಸಿದರು. ಬಂಧಿತನನ್ನು ಸಂತೋಷ್ ಕುಮಾರ್ ಕೆ.ಆರ್ (43), ತಂದೆ ರೊಕ್ಕಪ್ಪ, ಕೂಲಿ ಕಾರ್ಮಿಕ, ಕಣ ಬಂದೂರು ಗ್ರಾಮ ನಿವಾಸಿ ಎಂದು ಗುರುತಿಸಲಾಗಿದೆ.ಪೊಲೀಸರು ವಿಚಾರಣೆ ನಡೆಸಿದಾಗ, ಈತನವೇ ಹಿಂದಿನ ಕಳ್ಳತನ ಪ್ರಕರಣದ ಆರೋಪಿಯಾಗಿರುವುದು ಬಹಿರಂಗವಾಗಿದೆ. ತಕ್ಷಣವೇ ಆರೋಪಿಯನ್ನು ಬಂಧಿಸಿ, ಆತನಿಂದ 12.21 ಗ್ರಾಂ ತೂಕದ ಬಂಗಾರದ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.ಬಂಧಿತ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದ್ದು, ಪ್ರಕರಣದ ಮುಂದಿನ ತನಿಖೆಯನ್ನು ಪೊಲೀಸರು ಮುಂದುವರೆಸಿದ್ದಾರೆ. ಪೊಲೀಸರ ಈ ಕಾರ್ಯಾಚರಣೆಯಿಂದ ಸ್ಥಳೀಯರಲ್ಲಿ ಭದ್ರತಾ ಭಾವನೆ ಹೆಚ್ಚಾಗಿದೆ.

ವರದಿ: ಗಣೇಶ್ ರಿಪ್ಪನ್ ಪೇಟೆ

  • malnadsuddi36@gmail.com

    ಮಲ್ನಾಡ್ ಸುದ್ದಿ ಇದು ಕೇವಲ ಸುದ್ದಿ ವಾಹಿನಿಯಲ್ಲ ಮಲ್ನಾಡ್ ಸುದ್ದಿ ಇದು ಮಲೆನಾಡ ಜನರ ಧ್ವನಿ ಜನರೊಂದಿಗೆ ಸೇರಿ ಅನ್ಯಾಯದ ವಿರುದ್ಧ ಹೋರಾಡುವುದು ನಮ್ಮ ಮಲ್ನಾಡ್ ಸುದ್ದಿ ತಂಡ ನೈಜ್ಯ ಅಪರಾಧ. ಪ್ರಸ್ತುತ ರಾಜಕೀಯ. ಕ್ರೀಡೆ. ಸಾಂಸ್ಕೃತಿಕ ಕಾರ್ಯಕ್ರಮ. ಅನ್ಯಾಯದ ವಿರುದ್ಧ ಹೋರಾಟ. ಉಚಿತ ಕಾನೂನು ಸಲಹೆ. ಸಿನಿಮಾ ಸ್ಟೋರಿಗಳು. ಸರ್ಕಾರದ ಅನುದಾನಗಳ ಬಗ್ಗೆ ಸಮಗ್ರ ಮಾಹಿತಿ. ಒಟ್ಟಾರೆಯಾಗಿ ಸಮಾಜವನ್ನು ಸುಧಾರಿಸುವುದು ನಮ್ಮ ಮಲ್ನಾಡ್ ಸುದ್ದಿ ತಂಡದ ಗುರಿ

    Related Posts

    ರಿಪ್ಪನ್ ಪೇಟೆ: ಬೈಕ್–ಕಾರ್ ಡಿಕ್ಕಿ, ಸವಾರನಿಗೆ ಗಂಭೀರ ಗಾಯ

    ರಿಪ್ಪನ್ ಪೇಟೆ ಸಮೀಪದ ತೀರ್ಥಹಳ್ಳಿ ರಸ್ತೆಯಲ್ಲಿ ಇಂದು ಬೈಕ್ ಹಾಗೂ ಕಾರಿನ ನಡುವೆ ಭೀಕರ ಅಪಘಾತ ಸಂಭವಿಸಿದೆ. ರಸ್ತೆ ಬದಿಯಿಂದ ಅಡ್ಡಲಾಗಿ ಕಾರನ್ನು ತಿರುಗಿಸುವ ವೇಳೆ ಎದುರು ಬರುತ್ತಿದ್ದ ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ನಡೆದಿದೆ. ಅಪಘಾತದಲ್ಲಿ ಬೈಕ್…

    ಕೊಳವಳ್ಳಿ ಗ್ರಾಮದಲ್ಲಿ ಯುವಕ ಆತ್ಮಹತ್ಯೆಕಬಡ್ಡಿ ಆಟಗಾರ ಸುನೀಲ್ ದುರ್ಮರಣ…!!

    ರಿಪ್ಪನ್ ಪೇಟೆ ಸಮೀಪದ ಕೊಳವಳ್ಳಿ ಗ್ರಾಮದಲ್ಲಿ ಯುವಕನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಗುರುವಾರ ವರದಿಯಾಗಿದೆ.ಮೃತ ಯುವಕನನ್ನು ಕೊಳವಳ್ಳಿ ಗ್ರಾಮದ ಸುನೀಲ್ ಬಿನ್ ವೀರಭದ್ರ (23) ಎಂದು ಗುರುತಿಸಲಾಗಿದೆ. ಬುಧವಾರ ಸಂಜೆ ಕೆಲಸ ಮುಗಿಸಿಕೊಂಡು ಮನೆಗೆ ಬಂದ ಸುನೀಲ್, ನಂತರ…

    Leave a Reply

    Your email address will not be published. Required fields are marked *

    You Missed

    ರಿಪ್ಪನ್ ಪೇಟೆ: ಬೈಕ್–ಕಾರ್ ಡಿಕ್ಕಿ, ಸವಾರನಿಗೆ ಗಂಭೀರ ಗಾಯ

    ಕೊಳವಳ್ಳಿ ಗ್ರಾಮದಲ್ಲಿ ಯುವಕ ಆತ್ಮಹತ್ಯೆಕಬಡ್ಡಿ ಆಟಗಾರ ಸುನೀಲ್ ದುರ್ಮರಣ…!!

    6–9 ಮೊಬೈಲ್ ವೀಕ್ಷಣೆ ಬ್ಯಾನ್ ಡಂಗುರ: ಮಕ್ಕಳಿಗೆ ಅಲ್ಲ, ತಂದೆತಾಯಿಗಳಿಗೆ ಮೊದಲು ನಿಯಮ

    ಒಕ್ಕನೆ ಬಾವಿ ಗ್ರಾಮದಲ್ಲಿ ಅರಣ್ಯ ಇಲಾಖೆಯ ವಿರುದ್ಧ ಅಹೋರಾತ್ರಿ ಧರಣಿ

    ರಿಪ್ಪನ್‌ಪೇಟೆಯಲ್ಲಿ ಅಡಿಕೆ ಖರೀದಿ ಕೇಂದ್ರ ಉದ್ಘಾಟನೆ

    ನಕಲಿ ಬಂಗಾರ ನೀಡಿ ವಂಚನೆ- ಮಹಿಳೆ ಬಂಧನ