ರಿಪ್ಪನಪೇಟೆ ಪ್ರತಿಷ್ಠಿತ ಲಾಡ್ಜ್ ನಲ್ಲಿ ಕಳಪೆ ಮಟ್ಟದ ಲಿಫ್ಟ್ ಬಳಕೆ ಜನರ ಜೀವದ ಜೊತೆ ಚೆಲ್ಲಾಟ

Posted by

ರಿಪ್ಪನಪೇಟೆ : ಪಟ್ಟಣದ ಪ್ರಮುಖ ಪ್ರದೇಶದಲ್ಲಿರುವ ಪ್ರತಿಷ್ಠಿತ ರಾಯಲ್ ಕಂಫರ್ಟ್ ಲಾಡ್ಜ್ ಒಂದರಲ್ಲಿ ಕಳಪೆ ಮಟ್ಟದ TEKNIX ಎಂಬ ಲಿಫ್ಟ್ ಬಳಕೆ ಮಾಡಲಾಗುತ್ತಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಈ ಲಿಫ್ಟ್‌ನ ಸ್ಥಿತಿ ಹದಗೆಟ್ಟಿದ್ದು, ಯಾವುದೇ ಕ್ಷಣದಲ್ಲಿ ಅಪಾಯ ಸಂಭವಿಸುವ ಭೀತಿ ಸಾರ್ವಜನಿಕರಲ್ಲಿ ಹೆಚ್ಚಾಗಿದೆ.


ಲಾಡ್ಜ್‌ಗೆ ಬರುವ ಅತಿಥಿಗಳು ಹಾಗೂ ಸಿಬ್ಬಂದಿ ದಿನನಿತ್ಯ ಈ ಲಿಫ್ಟ್ ಅನ್ನು ಬಳಸುತ್ತಿದ್ದಾರೆ. ಆದರೆ ಲಿಫ್ಟ್‌ನಲ್ಲಿ ತಾಂತ್ರಿಕ ದೋಷಗಳು ಕಂಡುಬರುತ್ತಿದ್ದು, ಕೆಲವೊಮ್ಮೆ ಮಧ್ಯದಲ್ಲೇ ನಿಂತು ಹೋಗುವುದು, ಬಾಗಿಲು ಸರಿಯಾಗಿ ತೆರೆಯದೇ ಇದ್ದು 21 ಮಾರ್ಚ್ ದಿನ ಬೆಳಿಗ್ಗೆ ಏಕ ಏಕೀ ಲಿಫ್ಟ್ ನಿಂತಿದ್ದು 15 ನಿಮಿಷ ಉಸಿರು ಆಡಲು ಸಹ ಗಾಳಿ ಇಲ್ಲದೆ ಒದ್ದಾಡುವ ಪರಿಸ್ತಿತಿ ಬಂದಿದ್ದು ಸೇರಿದಂತೆ ಹಲವು ಸಮಸ್ಯೆಗಳು ಎದುರಾಗುತ್ತಿವೆ. ಇದರಿಂದ ಪ್ರಯಾಣಿಕರು ಆತಂಕಕ್ಕೆ ಒಳಗಾಗುತ್ತಿದ್ದಾರೆ.
ಸ್ಥಳೀಯರು ಹಾಗೂ ಗ್ರಾಹಕರು ಹಲವು ಬಾರಿ ಲಾಡ್ಜ್ ನಿರ್ವಹಣೆಗೆ ದೂರು ನೀಡಿದರೂ, ಯಾವುದೇ ಕ್ರಮ ಕೈಗೊಳ್ಳದಿರುವುದು ಅಸಮಾಧಾನಕ್ಕೆ ಕಾರಣವಾಗಿದೆ. “ಯಾವಾಗ ಬೇಕಾದರೂ ದೊಡ್ಡ ಅವಘಡ ಸಂಭವಿಸಬಹುದು. ಇದೊಂದು ಜೀವದ ಜೊತೆ ಆಟವಾಡುವಂತಹ ನಿರ್ಲಕ್ಷ್ಯ,” ಎಂದು ಗ್ರಾಹಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸುರಕ್ಷತಾ ಮಾನದಂಡಗಳನ್ನು ಉಲ್ಲಂಘಿಸಿ ಲಿಫ್ಟ್ ಬಳಕೆ ಮಾಡುತ್ತಿರುವ ಲಾಡ್ಜ್ ವಿರುದ್ಧ ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಈ ಘಟನೆ ಬೆಳಕಿಗೆ ಬಂದ ನಂತರ, ನಗರದಲ್ಲಿ ಇತರ ಲಾಡ್ಜ್‌ಗಳಲ್ಲಿಯೂ ಸುರಕ್ಷತಾ ವ್ಯವಸ್ಥೆಗಳ ಬಗ್ಗೆ ಪರಿಶೀಲನೆ ಅಗತ್ಯವಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

ವರದಿ : ಗಣೇಶ್ ರಿಪ್ಪನ್ ಪೇಟೆ

Leave a Reply

Your email address will not be published. Required fields are marked *