
ಶಿವಮೊಗ್ಗ: ಸಂಗೀತ ಕ್ಷೇತ್ರದಲ್ಲಿ ತನ್ನದೇ ಆದ ಪ್ರತಿಭೆ ಹಾಗೂ ಗಾಯನದ ಮೂಲಕ ಗುರುತಿಸಿಕೊಂಡಿರುವ ಶಿವಮೊಗ್ಗ ಜಿಲ್ಲೆಯ ಹೊಸನಗರದ ಯುವ ಗಾಯಕ ಅಭಿಜಿತ್ ರಾವ್ ಇದೀಗ ತಮಿಳುನಾಡಿನ ಜನಪ್ರಿಯ ಸಂಗೀತ ರಿಯಾಲಿಟಿ ಶೋ ‘ಸೂಪರ್ ಸಿಂಗರ್’ ಕಾರ್ಯಕ್ರಮಕ್ಕೆ ಆಯ್ಕೆಯಾಗುವ ಮೂಲಕ ಜಿಲ್ಲೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ.
ತಮಿಳಿನ ಜನಪ್ರಿಯ ದೂರದರ್ಶನ ವಾಹಿನಿ ಸ್ಟಾರ್ ವಿಜಯ್ ಟಿವಿಯಲ್ಲಿ ನವೆಂಬರ್ 21ರಿಂದ ಪ್ರಸಾರವಾಗಲಿರುವ ‘ಸೂಪರ್ ಸಿಂಗರ್’ ಕಾರ್ಯಕ್ರಮದಲ್ಲಿ ಅಭಿಜಿತ್ ರಾವ್ ತಮ್ಮ ಗಾಯನ ಪ್ರತಿಭೆಯನ್ನು ಪ್ರದರ್ಶಿಸಲಿದ್ದಾರೆ.
ಸಂಗೀತದ ಬಗ್ಗೆ ಅಪಾರ ಆಸಕ್ತಿ ಹೊಂದಿರುವ ಅಭಿಜಿತ್ ರಾವ್, ಖ್ಯಾತ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಅವರ ಕೆ.ಎಂ. ಮ್ಯೂಸಿಕ್ ಕನ್ಸರ್ವೇಟರಿಯಲ್ಲಿ ಸಂಗೀತಾಭ್ಯಾಸ ಮಾಡಿದ್ದಾರೆ. ಅಲ್ಲದೆ, ‘ಕಂಗುವಾ’, ‘ಲವ್ ಸ್ಟೋರಿ’ ಸೇರಿದಂತೆ ಹಲವು ಚಿತ್ರಗಳಲ್ಲಿ ಹಿನ್ನಲೆ ಗಾಯಕರಾಗಿ ಹಾಡುವ ಮೂಲಕ ತಮ್ಮ ಸಂಗೀತ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ.
ಇದರ ಜೊತೆಗೆ ‘ಸೋನಿಕ್ಸ್ ರೂಟ್ಸ್’ ತಂಡದ ಮೂಲಕವೂ ಸಂಗೀತ ಕ್ಷೇತ್ರದ ವಿವಿಧ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಇದೀಗ ತಮಿಳು ಭಾಷೆಯ ಜನಪ್ರಿಯ ಸಂಗೀತ ರಿಯಾಲಿಟಿ ಶೋಗೆ ಆಯ್ಕೆಯಾಗಿರುವುದು ಅವರ ಸಂಗೀತ ಪಯಣಕ್ಕೆ ಮತ್ತೊಂದು ಮಹತ್ವದ ಮೈಲಿಗಲ್ಲಾಗಿದೆ.
ಅಭಿಜಿತ್ ರಾವ್ ಅವರು ಹೊಸನಗರದ ಸಾಮಾಜಿಕ ಕಾರ್ಯಕರ್ತ ಎನ್.ಆರ್. ದೇವಾನಂದ್ ಹಾಗೂ ಶಾರದಾ ಸಂಗೀತ ಶಾಲೆಯ ಮಾಧುರಿ ದಂಪತಿಯ ಪುತ್ರರಾಗಿದ್ದಾರೆ.
ತಮ್ಮ ಮಾತೃಭಾಷೆಯಲ್ಲದ ತಮಿಳು ಭಾಷೆಯನ್ನು ಕಲಿತು, ಅಲ್ಲಿನ ಜನಪ್ರಿಯ ಸಂಗೀತ ವೇದಿಕೆಯಲ್ಲಿ ಅವಕಾಶ ಗಿಟ್ಟಿಸಿಕೊಂಡಿರುವ ಅಭಿಜಿತ್ ರಾವ್ ಅವರ ಸಾಧನೆಗೆ ಹೊಸನಗರ ಸೇರಿದಂತೆ ಶಿವಮೊಗ್ಗ ಜಿಲ್ಲೆಯಾದ್ಯಂತ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇವರ ಮುಂದಿನ ಸಂಗೀತ ಪಯಣ ಯಶಸ್ವಿಯಾಗಲಿ, ರಾಷ್ಟ್ರಮಟ್ಟದಲ್ಲಿ ಇನ್ನಷ್ಟು ಅವಕಾಶಗಳು ದೊರೆಯಲಿ ಎಂಬ ಆಶಯಗಳು ವ್ಯಕ್ತವಾಗಿವೆ.
- ತಮಿಳಿನ ಜನಪ್ರಿಯ ‘ಸೂಪರ್ ಸಿಂಗರ್’ ವೇದಿಕೆಗೆ ಹೊಸನಗರದ ಅಭಿಜಿತ್ ರಾವ್ ಆಯ್ಕೆ!
- ಮುಖ್ಯ ಸಚೇತಕರಾಗಿ ಆಯ್ಕೆಯಾದ ಶಾಸಕ ಬೇಳೂರು ಗೋಪಾಲಕೃಷ್ಣ ಅವರಿಗೆ ಅಭಿನಂದನೆಗಳ ಮಹಾಪೂರ…!
- ರಿಪ್ಪನ್ಪೇಟೆಯಲ್ಲಿ ನವವಿವಾಹಿತೆ ಅಪಹರಣದ ಆರೋಪ! ಎರಡು ಕಾರುಗಳಲ್ಲಿ ಬಂದು ಮನೆಗೆ ನುಗ್ಗಿ ಹಲ್ಲೆ ನಡೆಸಿದ ಆರೋಪ
- ರಾಷ್ಟ್ರ ಪ್ರಶಸ್ತಿ ವಿಜೇತ ಶಿಕ್ಷಕಿ ರತ್ನಕುಮಾರಿಗೆ SBI ಗೌರವ | ಹೊಸನಗರ | Malnad Suddi Express
- ಮೂರು ತಿಂಗಳ ವೇತನ ಬಾಕಿ: ಸರ್ಕಾರಿ ಆಸ್ಪತ್ರೆ ಸಿಬ್ಬಂದಿ ಪ್ರತಿಭಟನೆಗೆ ಕುರುವಳ್ಳಿ ನಾಗರಾಜ್ ಮಧ್ಯಸ್ಥಿಕೆಯಿಂದ ತಾತ್ಕಾಲಿಕ ತೆರೆ
#Karnataka news # bengloore news# state news #ripponpete news # sagara news#shivamogga news Recent news daily news murder news shivamogga murder news hindu murder boy murder Ripponpetenews shivamogganews sagaranews hosanagaranews thirthahalli ews livenews Karnatakanews Ripponpetenews shivamogganews sagaranews hosanagaranews thirthahalli ews livenews Karnatakanews Kannadanews Ripponpetenews shivamogganews sagaranews hosanagaranews thirthahalli ews livenews Karnatakanews Kannadanews tirtahalli news kudumallige grama panchayt Ripponpet news local news rpt news shivamogga news Shivamogga news state news karnataka news







Leave a Reply