Malnad

Suddi Express

ರಿಪ್ಪನ್‌ಪೇಟೆಯಲ್ಲಿ ನವವಿವಾಹಿತೆ ಅಪಹರಣದ ಆರೋಪ! ಎರಡು ಕಾರುಗಳಲ್ಲಿ ಬಂದು ಮನೆಗೆ ನುಗ್ಗಿ ಹಲ್ಲೆ ನಡೆಸಿದ ಆರೋಪ

ರಿಪ್ಪನ್‌ಪೇಟೆಯಲ್ಲಿ ನವವಿವಾಹಿತೆ ಅಪಹರಣದ ಆರೋಪ, ಎರಡು ಕಾರುಗಳಲ್ಲಿ ಬಂದ ಗುಂಪಿನಿಂದ ಮನೆಗೆ ನುಗ್ಗಿ ಹಲ್ಲೆ ನಡೆಸಿದ ಆರೋಪದ ಕುರಿತು ಮಲ್ನಾಡ್ ಸುದ್ದಿ ಎಕ್ಸ್‌ಪ್ರೆಸ್ ವರದಿ.
ರಿಪ್ಪನ್‌ಪೇಟೆಯಲ್ಲಿ ನವವಿವಾಹಿತೆ ಅಪಹರಣದ ಆರೋಪ, ಎರಡು ಕಾರುಗಳಲ್ಲಿ ಬಂದ ಗುಂಪಿನಿಂದ ಮನೆಗೆ ನುಗ್ಗಿ ಹಲ್ಲೆ ನಡೆಸಿದ ಆರೋಪದ ಕುರಿತು ಮಲ್ನಾಡ್ ಸುದ್ದಿ ಎಕ್ಸ್‌ಪ್ರೆಸ್ ವರದಿ.
ರಿಪ್ಪನ್‌ಪೇಟೆಯಲ್ಲಿ ನವವಿವಾಹಿತೆ ಅಪಹರಣದ ಆರೋಪ, ಎರಡು ಕಾರುಗಳಲ್ಲಿ ಬಂದ ಗುಂಪಿನಿಂದ ಮನೆಗೆ ನುಗ್ಗಿ ಹಲ್ಲೆ ನಡೆಸಿದ ಆರೋಪದ ಕುರಿತು .

ರಿಪ್ಪನ್‌ಪೇಟೆ: ಪ್ರೀತಿಸಿ ವಿವಾಹವಾಗಿದ್ದ ನವದಂಪತಿಯ ಕುಟುಂಬದ ವಿವಾದ ಇದೀಗ ಗಂಭೀರ ಸ್ವರೂಪ ಪಡೆದುಕೊಂಡಿದೆ. ಪತಿ ನಾಗಭೂಷಣ್ ಅವರೊಂದಿಗೆ ಗವಟೂರಿನ ಶ್ರೀರಾಮನಗರ ನಿವಾಸದಲ್ಲಿ ವಾಸವಾಗಿದ್ದ ನವವಿವಾಹಿತೆ ದೀಕ್ಷಾ ಅವರನ್ನು ಸಂಬಂಧಿಕರು ಎರಡು ಕಾರುಗಳಲ್ಲಿ ಬಂದು ಹಲ್ಲೆ ನಡೆಸಿ ಬಲವಂತವಾಗಿ ಕರೆದೊಯ್ದಿದ್ದಾರೆ ಎಂಬ ಗಂಭೀರ ಆರೋಪ ರಿಪ್ಪನ್‌ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕೇಳಿಬಂದಿದೆ.

ನವೆಂಬರ್ 19ರಂದು ಸಂಜೆ ಸುಮಾರು 7.30ರ ವೇಳೆಗೆ KA-15-P-1144 ನೋಂದಣಿ ಸಂಖ್ಯೆಯ ಕ್ರೆಟಾ ಕಾರು ಹಾಗೂ ನೀಲಿ ಬಣ್ಣದ ಸ್ವಿಫ್ಟ್ ಕಾರಿನಲ್ಲಿ ವೀಣಾ, ಲಕ್ಷ್ಮಣ್ ಸೇರಿದಂತೆ ಅವರ ಸಂಬಂಧಿಕರು ಹಾಗೂ ಇತರರು ಗವಟೂರಿನ ಶ್ರೀರಾಮನಗರದಲ್ಲಿರುವ ನಾಗಭೂಷಣ್ ಅವರ ಮನೆಗೆ ಬಂದಿದ್ದಾರೆ ಎನ್ನಲಾಗಿದೆ.

ಬಳಿಕ ಏಕಾಏಕಿ ಮನೆಗೆ ನುಗ್ಗಿದ ಆರೋಪಿತರು ದೀಕ್ಷಾ ಅವರ ಮೇಲೆ ಹಲ್ಲೆ ನಡೆಸಿದ್ದಲ್ಲದೆ, ಪತಿ ನಾಗಭೂಷಣ್ ಹಾಗೂ ಅವರ ತಂದೆ-ತಾಯಿಯ ಮೇಲೂ ಹಲ್ಲೆ ನಡೆಸಿ, ಅವಾಚ್ಯವಾಗಿ ನಿಂದಿಸಿ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಈ ವೇಳೆ ದೀಕ್ಷಾ ಅವರನ್ನು ಪ್ರಜ್ಞೆ ತಪ್ಪುವಂತೆ ಮಾಡಿ ಬಲವಂತವಾಗಿ ಕಾರಿನಲ್ಲಿ ಕರೆದೊಯ್ದಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.

ಪ್ರೀತಿಸಿ ವಿವಾಹವಾಗಿದ್ದ ದೀಕ್ಷಾ ಮತ್ತು ನಾಗಭೂಷಣ್ ದಂಪತಿ ವಿವಾಹದ ಬಳಿಕ ಗವಟೂರಿನ ಶ್ರೀರಾಮನಗರದಲ್ಲಿ ವಾಸವಾಗಿದ್ದರು ಎನ್ನಲಾಗಿದೆ. ಈ ಹಿಂದೆ ಸಂಬಂಧಿಕರಿಂದ ರಕ್ಷಣೆ ಕೋರಿ ದೀಕ್ಷಾ ಪೊಲೀಸ್ ಠಾಣೆಗೆ ತೆರಳಿ ಮನವಿ ಮಾಡಿಕೊಂಡಿದ್ದರು ಎಂಬ ಮಾಹಿತಿಯೂ ಲಭ್ಯವಾಗಿದೆ.

ಈ ಘಟನೆಗೆ ಸಂಬಂಧಿಸಿದಂತೆ ನವೆಂಬರ್ 19ರಂದು ರಿಪ್ಪನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸ್ ಉಪನಿರೀಕ್ಷಕ ರಾಜು ರೆಡ್ಡಿ ಅವರು ಪ್ರಕರಣದ ಕುರಿತು ತನಿಖೆ ಮುಂದುವರಿಸಿದ್ದಾರೆ.

ಪ್ರೀತಿಸಿ ಮದುವೆಯಾದ ಕೆಲವೇ ದಿನಗಳಲ್ಲಿ ನವವಿವಾಹಿತೆಯ ಅಪಹರಣದ ಆರೋಪ ಕೇಳಿಬಂದಿರುವುದು ಸ್ಥಳೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದ್ದು, ಪ್ರಕರಣದ ಸಂಪೂರ್ಣ ಸತ್ಯಾಸತ್ಯತೆ ಪೊಲೀಸ್ ತನಿಖೆಯಿಂದ ಹೊರಬರಬೇಕಿದೆ.

#Karnataka news # bengloore news# state news #ripponpete news # sagara news#shivamogga news Recent news daily news murder news shivamogga murder news hindu murder boy murder Ripponpetenews shivamogganews sagaranews hosanagaranews thirthahalli ews livenews Karnatakanews Ripponpetenews shivamogganews sagaranews hosanagaranews thirthahalli ews livenews Karnatakanews Kannadanews Ripponpetenews shivamogganews sagaranews hosanagaranews thirthahalli ews livenews Karnatakanews Kannadanews tirtahalli news kudumallige grama panchayt Ripponpet news local news rpt news shivamogga news Shivamogga news state news karnataka news

Leave a Reply

Your email address will not be published. Required fields are marked *