ಹೊಸನಗರಕ್ಕೆ ಪ್ರತ್ಯೇಕ ವಿಧಾನಸಭಾ ಕ್ಷೇತ್ರ ಅಗತ್ಯ: ಪೂರ್ವಭಾವಿ ಸಭೆಯಲ್ಲಿ ಏಕಮತದ ಅಭಿಪ್ರಾಯ

ಹೊಸನಗರ: ಮುಳುಗಡೆ ಸಮಸ್ಯೆಯಿಂದ ಸಂಕಷ್ಟ ಅನುಭವಿಸುತ್ತಿರುವ ತಾಲೂಕಿನ ಜನರಿಗೆ ದೀರ್ಘಕಾಲೀನ ಪರಿಹಾರ ಒದಗಿಸಬೇಕಾದರೆ ಹೊಸನಗರಕ್ಕೆ ಪ್ರತ್ಯೇಕ ವಿಧಾನಸಭಾ ಕ್ಷೇತ್ರ ರಚನೆ ಮಾಡುವುದು ಅನಿವಾರ್ಯ ಎಂದು ಮೂಲೆಗದ್ದೆ ಮಠದಅಭಿನವಚನ್ನಬಸವ ಸ್ವಾಮೀಜಿ ಅಭಿಪ್ರಾಯಪಟ್ಟರು.

ಹೊಸನಗರ ವಿಧಾನಸಭಾ ಕ್ಷೇತ್ರ ಮರುಸ್ಥಾಪನೆಗಾಗಿ ಕೈಗೊಳ್ಳಲಿರುವ ಹೋರಾಟದ ರೂಪರೇಖೆ ಕುರಿತು ಗುರುವಾರ ಗಾಯತ್ರಿ ಮಂದಿರದಲ್ಲಿ ನಡೆದ ಪೂರ್ವಭಾವಿ ಸಭೆಗೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕ್ಷೇತ್ರ ರಚನೆಯಾದಲ್ಲಿ ಅಭಿವೃದ್ಧಿ ಯೋಜನೆಗಳು ವೇಗ ಪಡೆಯಲಿವೆ ಎಂದು ಹೇಳಿದರು. ಈ ಹೋರಾಟ ಯಶಸ್ವಿಯಾಗಲು ಪ್ರತಿಯೊಬ್ಬರೂ ನಿಸ್ವಾರ್ಥ ಮನೋಭಾವದಿಂದ ಕೈಜೋಡಿಸಬೇಕು. ಅಧಿಕಾರಿಗಳ ಗಮನ ಸೆಳೆಯುವ ಮಟ್ಟದಲ್ಲಿ ಸಂಘಟಿತ ಮತ್ತು ಬಲಿಷ್ಠ ಹೋರಾಟ ನಡೆಸಬೇಕಿದೆ ಎಂದು ಕರೆ ನೀಡಿದರು. ಯುವಕರು, ಸಮಾಜಸೇವಕರು, ವಿವಿಧ ಸಂಘಟನೆಗಳ ಪ್ರಮುಖರು ಪಕ್ಷಭೇದ ಮರೆತು ಒಗ್ಗಟ್ಟಿನಿಂದ ಮುಂದೆ ಬರಬೇಕು ಎಂದರು.

ವಿಡಿಯೋವನ್ನ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ 👇

ಮಾಜಿ ಸಚಿವ ಕಿಮ್ಮನೆ ರತ್ನಾಕರ್ : ಮಾತನಾಡಿ, ಪ್ರಸ್ತುತ ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರ ಸುಮಾರು 400 ಕಿ.ಮೀ ವ್ಯಾಪ್ತಿಯನ್ನು ಹೊಂದಿದ್ದು, ಸಂಪೂರ್ಣ ಕ್ಷೇತ್ರವನ್ನು ಪ್ರವಾಸ ಮಾಡುವುದು ಸವಾಲಿನ ಸಂಗತಿ ಎಂದು ಹೇಳಿದರು. ಭೌಗೋಳಿಕ ಪರಿಸ್ಥಿತಿಯನ್ನು ಆಧರಿಸಿ ಮೇಘಾಲಯ, ಅಸ್ಸಾಂ ಮುಂತಾದ ರಾಜ್ಯಗಳಲ್ಲಿ ಕಡಿಮೆ ಜನಸಂಖ್ಯೆಯಿದ್ದರೂ ವಿಶೇಷ ವಿಧಾನಸಭಾ ಕ್ಷೇತ್ರಗಳನ್ನು ರಚಿಸಿರುವ ಉದಾಹರಣೆಗಳಿವೆ. ಅದೇ ರೀತಿಯ ನ್ಯಾಯ ಹೊಸನಗರ ತಾಲೂಕಿನಿಗೂ ಸಿಗಬೇಕು. ಕ್ಷೇತ್ರ ಪುನರ್‌ರಚನೆಗೆ ಕೇಂದ್ರ ಸರ್ಕಾರ ಮುಂದಾಗಬೇಕು ಎಂದು ಅವರು ಒತ್ತಾಯಿಸಿದರು.

ಶಾಸಕಬೇಳೂರು ಗೋಪಾಲಕೃಷ್ಣ : ಮಾತನಾಡಿ, ಹೊಸನಗರ ಕ್ಷೇತ್ರ ಮರುಸ್ಥಾಪನೆ ಹೋರಾಟಕ್ಕೆ ತಮ್ಮ ಸಂಪೂರ್ಣ ಬೆಂಬಲವಿದೆ ಎಂದು ತಿಳಿಸಿದರು. ಈ ವಿಷಯವನ್ನು ತಾವು ಹಾಗೂ ಆರಗ ಜ್ಞಾನೇಂದ್ರ ವಿಧಾನಸಭೆಯಲ್ಲಿ ಪ್ರಸ್ತಾಪಿಸಿ ಸರ್ಕಾರದ ಗಮನ ಸೆಳೆಯಲು ಪ್ರಯತ್ನಿಸುವುದಾಗಿ ಹೇಳಿದರು.

ಮಾಜಿ ಶಾಸಕಹರತಾಳು ಹಾಲಪ್ಪ : ಮಾತನಾಡಿ, ಹೋರಾಟ ಆರಂಭಿಸುವುದಷ್ಟೇ ಮುಖ್ಯವಲ್ಲ; ಅದನ್ನು ನಿರಂತರವಾಗಿ ಮುಂದುವರಿಸುವ ಮನೋಬಲವೂ ಅಗತ್ಯ ಎಂದು ತಿಳಿಸಿದರು. ಒಂದು ಸಭೆ ನಡೆಸಿ ನಂತರ ದೀರ್ಘಕಾಲ ಮೌನವಾಗಿದ್ದರೆ ಫಲಶ್ರುತಿ ದೊರೆಯದು. ಈಗ ಆರಂಭಿಸಿರುವ ಹೋರಾಟ ನಿರಂತರವಾಗಿರಬೇಕು ಎಂದು ಅವರು ಅಭಿಪ್ರಾಯಪಟ್ಟರು.ಈ ಸಂದರ್ಭದಲ್ಲಿ ಶಾಸಕ ಆರಗ ಜ್ಞಾನೇಂದ್ರ, : ಮಾಜಿ ಶಾಸಕರಾದ ಬಿ. ಸ್ವಾಮಿರಾವ್, ಡಾ. ಜಿ.ಡಿ. ನಾರಾಯಣಪ್ಪ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಕಲಗೋಡು ರತ್ನಾಕರ ಸೇರಿದಂತೆ ಹಲವರು ಕ್ಷೇತ್ರ ರಚನೆಯ ಅಗತ್ಯತೆ ಮತ್ತು ಅದರ ಮಹತ್ವವನ್ನು ವಿವರಿಸಿದರು.ವಕೀಲರ ಸಂಘದ ಅಧ್ಯಕ್ಷ ಚಂದ್ರಪ್ಪ, ಪ್ರಮುಖರಾದ ಎನ್.ಆರ್. ದೇವಾನಂದ, ವರ್ತೇಶ್, ಬಿ.ಜಿ. ಚಂದ್ರಮೌಳಿ, ತಿ.ನಾ. ಶ್ರೀನಿವಾಸ್, ಚಿದಂಬರ, ಶ್ರೀಧರ್ ಉಡುಪ, ಶ್ರೀನಿವಾಸ್ ಕಾಮತ್ ಜಯರಾಮ್ ಶೆಟ್ಟಿ ಸೇರಿದಂತೆ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಮತ್ತು ಸಮಾಜಸೇವಕರು ಸಭೆಯಲ್ಲಿ ಭಾಗವಹಿಸಿ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದರು.

  • malnadsuddi36@gmail.com

    ಮಲ್ನಾಡ್ ಸುದ್ದಿ ಇದು ಕೇವಲ ಸುದ್ದಿ ವಾಹಿನಿಯಲ್ಲ ಮಲ್ನಾಡ್ ಸುದ್ದಿ ಇದು ಮಲೆನಾಡ ಜನರ ಧ್ವನಿ ಜನರೊಂದಿಗೆ ಸೇರಿ ಅನ್ಯಾಯದ ವಿರುದ್ಧ ಹೋರಾಡುವುದು ನಮ್ಮ ಮಲ್ನಾಡ್ ಸುದ್ದಿ ತಂಡ ನೈಜ್ಯ ಅಪರಾಧ. ಪ್ರಸ್ತುತ ರಾಜಕೀಯ. ಕ್ರೀಡೆ. ಸಾಂಸ್ಕೃತಿಕ ಕಾರ್ಯಕ್ರಮ. ಅನ್ಯಾಯದ ವಿರುದ್ಧ ಹೋರಾಟ. ಉಚಿತ ಕಾನೂನು ಸಲಹೆ. ಸಿನಿಮಾ ಸ್ಟೋರಿಗಳು. ಸರ್ಕಾರದ ಅನುದಾನಗಳ ಬಗ್ಗೆ ಸಮಗ್ರ ಮಾಹಿತಿ. ಒಟ್ಟಾರೆಯಾಗಿ ಸಮಾಜವನ್ನು ಸುಧಾರಿಸುವುದು ನಮ್ಮ ಮಲ್ನಾಡ್ ಸುದ್ದಿ ತಂಡದ ಗುರಿ

    Related Posts

    ಬಾವಿ ಅನುದಾನದ ಹಣ ಇದ್ದರೂ ಗ್ರಾಮಸ್ಥರಿಂದ 60000 ಹಣ ವಸೂಲಿ:

    Despite the government releasing funds for the construction of a well in Kudumallige Gram Panchayat limits of Thirthahalli taluk, money has been collected from the villagers ತೀರ್ಥಹಳ್ಳಿ : ತಾಲೂಕಿನ ಕುಡುಮಲ್ಲಿಗೆ…

    ಶಿವಮೊಗ್ಗ ಹಿಂದುಳಿದ ವರ್ಗಗಳ ಕುರುವಳ್ಳಿ ನಾಗರಾಜ್ ಪ್ರಧಾನ ಕಾರ್ಯದರ್ಶಿ ಆಗಿ ಆಯ್ಕೆ:

    Shivamogga: Kuruvalli Nagaraj has been appointed as the General Secretary of the Shivamogga District Congress Backward Classes (Youth Wing) unit. ಶಿವಮೊಗ್ಗ: ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗಗಳ (ಯುವ ಸಂಘಟನೆ) ಘಟಕದ ಪ್ರಧಾನ…

    Leave a Reply

    Your email address will not be published. Required fields are marked *

    You Missed

    ಬಾವಿ ಅನುದಾನದ ಹಣ ಇದ್ದರೂ ಗ್ರಾಮಸ್ಥರಿಂದ 60000 ಹಣ ವಸೂಲಿ:

    ಶಿವಮೊಗ್ಗ ಹಿಂದುಳಿದ ವರ್ಗಗಳ ಕುರುವಳ್ಳಿ ನಾಗರಾಜ್ ಪ್ರಧಾನ ಕಾರ್ಯದರ್ಶಿ ಆಗಿ ಆಯ್ಕೆ:

    ಚಿನ್ನ ಕಳವು ಆರೋಪಿ ಬಂಧನ 30 ಗ್ರಾಂ ಚಿನ್ನದ ಗಟ್ಟಿ ಪೊಲೀಸರ ವಶಕ್ಕೆ

    ಫೇಸ್ಬುಕ್ ಇನ್ಸ್ಟಾಗ್ರಾಮ್ ಮೂಲಕ ಹನಿ ಟ್ರ್ಯಾಪ್ ಪ್ಯಾಷನ್ ಡಿಸೈನರ್ ಬಂಧನ:

    ಟ್ರಾಕ್ಟರ್ ಪಲ್ಟಿ: ಬಾಲಕ ಸ್ಥಳದಲ್ಲೇ ಸಾವು

    ಹನಿ ಟ್ರಾಪ್. ಆರೋಪಿ ಗಳ ಬಂಧನ