ವಿದ್ಯಾರ್ಥಿಗಳಲ್ಲಿ ವ್ಯಾಪಾರ ಮನೋಭಾವ ಬೆಳೆಸಿದ ವಿನೂತನ ಪ್ರಯತ್ನ

ಬಾಲಕರ ಶಾಲೆಯಲ್ಲಿ ವಿದ್ಯಾರ್ಥಿಗಳಿಗಾಗಿ “ಮಕ್ಕಳ ಸಂತೆ” ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಶಾಲಾ ಆವರಣದಲ್ಲಿ ಚೈತನ್ಯಮಯ ವಾತಾವರಣ ನಿರ್ಮಾಣಗೊಂಡಿತು.ಈ ಕಾರ್ಯಕ್ರಮದ ಉದ್ದೇಶ ವಿದ್ಯಾರ್ಥಿಗಳಲ್ಲಿ ಸ್ವಾವಲಂಬನೆ, ವ್ಯವಹಾರ ಕೌಶಲ್ಯ ಹಾಗೂ ಹಣದ ಮಹತ್ವದ ಅರಿವು ಮೂಡಿಸುವುದಾಗಿದೆ. ವಿದ್ಯಾರ್ಥಿಗಳು ತಮ್ಮಿಂದಲೇ ವಿವಿಧ ವಸ್ತುಗಳನ್ನು ತರಿಸಿ, ಸಣ್ಣ ಸಂತೆ ಮಾದರಿಯಲ್ಲಿ ಮಾರಾಟ ನಡೆಸಿದರು.ತರಕಾರಿ, ಹಣ್ಣುಗಳು, ಮನೆಯಲ್ಲೇ ತಯಾರಿಸಿದ ತಿಂಡಿಗಳು, ಹಸ್ತ ಕಲಾ ವಸ್ತುಗಳು ಸೇರಿದಂತೆ ವಿವಿಧ ಅಂಗಡಿ ಮಕ್ಕಳು ಹಾಕಿಕೊಂಡು, ಖರೀದಿ–ಮಾರಾಟ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡರು. ಕೆಲವರು ಬೆಲೆ ಪೆಚ್ಚು ಮಾತುಕತೆ ನಡೆಸಿದರೆ, ಮತ್ತಿಬ್ಬರು ಲೆಕ್ಕಾಚಾರದಲ್ಲಿ ತೊಡಗಿಸಿಕೊಂಡು ತಮ್ಮ ವ್ಯಾಪಾರ ಕೌಶಲ್ಯವನ್ನು ಪ್ರದರ್ಶಿಸಿದರು.ಶಿಕ್ಷಕರು ಈ ಕಾರ್ಯಕ್ರಮದ ಮೂಲಕ ಮಕ್ಕಳಲ್ಲಿ ಆತ್ಮವಿಶ್ವಾಸ ಮತ್ತು ನಾಯಕತ್ವ ಗುಣಗಳು ಬೆಳೆಸುವ ಪ್ರಯತ್ನ ಮಾಡಲಾಗಿದೆ ಎಂದು ತಿಳಿಸಿದರು. ಪೋಷಕರು ಹಾಗೂ ಸ್ಥಳೀಯರು ಸಹ ಮಕ್ಕಳ ಉತ್ಸಾಹವನ್ನು ಮೆಚ್ಚಿದರು.ಮಕ್ಕಳ ಸಂತೆ ಕಾರ್ಯಕ್ರಮವು ವಿದ್ಯಾರ್ಥಿಗಳಿಗೆ ಪಾಠಪುಸ್ತಕದ ಹೊರಗಿನ ಜೀವನ ಕೌಶಲ್ಯಗಳನ್ನು ಕಲಿಸುವಲ್ಲಿ ಮಹತ್ವದ ಪಾತ್ರವಹಿಸಿದೆ ಎಂಬ ಅಭಿಪ್ರಾಯ ವ್ಯಕ್ತವಾಯಿತು.

By Anjan Kerehalli

ಮಲ್ನಾಡ್ ಸುದ್ದಿ ಎಕ್ಸ್ಪ್ರೆಸ್ – ನಮ್ಮ ಧ್ವನಿ, ನಿಮ್ಮ ಹಕ್ಕು ಮಲ್ಲಾಡ್ ಸುದ್ದಿ ಎಕ್ಸ್ಪ್ರೆಸ್ ದು ಮಲೆನಾಡ ಜನರ ಧ್ವನಿ “ನಮ್ಮ ಮಲ್ನಾಡ್ ಸುದ್ದಿ ಎಕ್ಸ್ಪ್ರೆಸ್ – ಜನರೊಂದಿಗೆ, ಜನರಿಗಾಗಿ.”

Leave a Reply

Your email address will not be published. Required fields are marked *