ಗೃಹಪ್ರವೇಶ ಮುಗಿಸಿ ಮನೆಗೆ ಬರುತ್ತಿದ್ದ ಕಾರು ಅಪಘಾತ ಗಿಡಗಿದ್ದು ಕಾರಿನಲ್ಲಿ ಇರುವವರು ಪ್ರಾಣಪಾಯದಿಂದ ಪಾರಗಿದ್ದಾರೆ. ಶಿವಮೊಗ್ಗದಿಂದ ಬರುತಿದ್ದ ಕಾರು ಶಿವಪುರದ ಹತ್ತಿರ ಸುಣ್ಣದಬಸ್ತಿ ಬಳಿ ದನ ಅಡ್ಡ ಬಂದ ಕಾರಣ ಚಾಲಕನ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿದೆ. ಈ ಘಟನೆಯಲ್ಲಿ ಕಾರಿನಲ್ಲಿ ಇರುವವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಗಾಯಳುಗಳನ್ನ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗ ಆಸ್ಪತ್ರೆಗೆ ರವನ ಮಾಡಲಾಗಿದೆ .

.

ಗಾಯಳುಗಳು ಬಿದ್ರಳ್ಳಿ ಭಾಗ್ಯಲಕ್ಷ್ಮಿ ಬಸ್ ಮಾಲೀಕರದ ಪುರುಷೋತ್ತಮ್ ಅವರ ಪುತ್ರ ರಾಘವೇಂದ್ರ ಮತ್ತು ಅವರ ಬಸ್ ಚಾಲಕ ಹರೀಶ್ ಮತ್ತು ರಮೇಶ್ ಮತ್ತೊಬ್ಬ ವ್ಯಕ್ತಿ ಸೇರಿ 4 ಜನ ಪ್ರಯಾಣಿಸುತಿದ್ದರು ಎಂದು ಹೇಳಲಾಗಿದೆ. ಇನ್ನು ಈ ಘಟನೆ 6 ತಾರೀಕು ರಾತ್ರಿ ಸುಮಾರು 9.30 ಆಗಿರಬಹುದು ಎಂದು ಸೂಚಿಸಲಾಗಿದೆ.

ಕೆರೇಹಳ್ಳಿ ಅಂಜನ್ ✒️✒️✒️

By Anjan Kerehalli

ಮಲ್ನಾಡ್ ಸುದ್ದಿ ಎಕ್ಸ್ಪ್ರೆಸ್ – ನಮ್ಮ ಧ್ವನಿ, ನಿಮ್ಮ ಹಕ್ಕು ಮಲ್ಲಾಡ್ ಸುದ್ದಿ ಎಕ್ಸ್ಪ್ರೆಸ್ ದು ಮಲೆನಾಡ ಜನರ ಧ್ವನಿ “ನಮ್ಮ ಮಲ್ನಾಡ್ ಸುದ್ದಿ ಎಕ್ಸ್ಪ್ರೆಸ್ – ಜನರೊಂದಿಗೆ, ಜನರಿಗಾಗಿ.”

Leave a Reply

Your email address will not be published. Required fields are marked *