ಹಿಂದು ಸಂಗಮ ಆಯೋಜನಾ ಸಮಿತಿ ವತಿಯಿಂದಹೊಸನಗರ ಪಟ್ಟಣದ ಶ್ರೀ ಗಾಯತ್ರಿ ಮಂದಿರದಲ್ಲಿ ಫೆಬ್ರವರಿ 01ರಂದುವಿರಾಟ್ ಹಿಂದು ಸಮಾಜೋತ್ಸವ ನೆರವೇರಿತು..ಹೊಸನಗರದ ವಿವಿಧ ಮಹಿಳಾ ಭಜನಾ ಮಂಡಳಿಯ ಸದಸ್ಯರು ಶ್ರೀಮದ್ಭಗವದ್ಗೀತೆಯ ಹನ್ನೊಂದನೆಯ ಅಧ್ಯಾಯ ಮತ್ತು ಲಲಿತ ಸಹಸ್ರನಾಮವನ್ನು ಸಾಮೂಹಿಕವಾಗಿ ಪಠಣ ಮಾಡಿದರು..ನಂತರ ನಡೆದ ಸಂವಾದ-ಚರ್ಚೆಯಲ್ಲಿ *ಉತ್ತಮ ಹಿಂದು ಮನೆ* ವಿಷಯವಾಗಿ ಮಾತಾ ಭಗಿನಿಯರು, ಸಜ್ಜನ ಬಂಧುಗಳು,ಯುವಕರು ಉತ್ಸಾಹದಿಂದ ಭಾಗವಹಿಸಿ,ಮನೆಯಲ್ಲಿ ಪಾಲಿಸಬೇಕಾದ ಅಗತ್ಯ ಸಂಗತಿಗಳನ್ನು ಚರ್ಚಿಸಿದರು..ಹಿಂದು ಸಂಗಮ ತಾಲೂಕು ಸಮಿತಿಯ ಸದಸ್ಯರಾದ ಶ್ರೀ ದೇವಾನಂದ್ ಎನ್ ಆರ್ ಅವರು ಎಲ್ಲರನ್ನು ಸ್ವಾಗತಿಸಿ, ಪ್ರಾಸ್ತಾವಿಕ ನುಡಿಗಳನ್ನು ನುಡಿದರು..ದಿಕ್ಸೂಚಿ ಭಾಷಣಕಾರರಾಗಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತ ಅಧಿಕಾರಿ ಶ್ರೀ ಮಂಗೇಶ್ ಭೇನ್ಡೆಯವರು ಆಗಮಿಸಿ, ಹಿಂದು ಸಮಾಜದ ಶ್ರೀಮಂತಿಕೆ- ಸಂಘರ್ಷಮಯ ಇತಿಹಾಸ- ಹೋರಾಟ- ವಿಷಯಗಳನ್ನು ಎಳೆಎಳೆಯಾಗಿ ಪ್ರಸ್ತಾಪ ಮಾಡಿದರು..ಭವಿಷ್ಯದಲ್ಲಿ ಹಿಂದು ಸಮಾಜ ಇನ್ನಷ್ಟು ಸಂಘಟಿತರಾಗುವುದು ವರ್ತಮಾನದ ಅವಶ್ಯಕ ಎಂದು ಇತಿಹಾಸದ ತಪ್ಪುಗಳನ್ನು ಮರುಕಳಿಸದಂತೆ ಎಚ್ಚರಿಕೆಯಿಂದ ಇರುವಂತೆ ತಿಳಿಸಿದರು..ಹಿಂದು ಪಂಚಾಂಗ, ಸಾಮರಸ್ಯ ಮಂತ್ರ, ಗೀತೆ ಮತ್ತು ಶಾಂತಿ ಮಂತ್ರಗಳ ಅಭ್ಯಾಸ ಸೇರಿದ್ದ ಹಿಂದು ಬಂಧುಗಳ ಗಮನ ಸೆಳೆಯಿತು..ಭೋಜನದೊಂದಿಗೆ ಸಮಾಜೋತ್ಸವ ಸಂಪನ್ನಗೊಂಡಿತು..

ವಿಠ್ಠಲ್ ರಾವ್ ✒️✒️✒️

By Anjan Kerehalli

ಮಲ್ನಾಡ್ ಸುದ್ದಿ ಎಕ್ಸ್ಪ್ರೆಸ್ – ನಮ್ಮ ಧ್ವನಿ, ನಿಮ್ಮ ಹಕ್ಕು ಮಲ್ಲಾಡ್ ಸುದ್ದಿ ಎಕ್ಸ್ಪ್ರೆಸ್ ದು ಮಲೆನಾಡ ಜನರ ಧ್ವನಿ “ನಮ್ಮ ಮಲ್ನಾಡ್ ಸುದ್ದಿ ಎಕ್ಸ್ಪ್ರೆಸ್ – ಜನರೊಂದಿಗೆ, ಜನರಿಗಾಗಿ.”

Leave a Reply

Your email address will not be published. Required fields are marked *