ರಿಪ್ಪನ್‌ಪೇಟೆ, ಜೂನ್ 25: ಪೊಲೀಸ್ ಮೂಲಗಳ ಪ್ರಕಾರ, ಗಸ್ತು ಕರ್ತವ್ಯದಲ್ಲಿದ್ದ ಸಿಬ್ಬಂದಿಗೆ ಅರಸಾಳು ಗ್ರಾಮದ ಮಾಣಿಕ್ಯರೆ ಸಮೀಪದ ನೀಲಗಿರಿ ತೋಟದಲ್ಲಿ ಕೆಲವರು ಅಕ್ರಮವಾಗಿ ಹಣ ಪಣಕ್ಕಿಟ್ಟು ಇಸ್ಪೀಟು ಜೂಜಾಟ ಆಡುತ್ತಿರುವ ಕುರಿತು ಮಾಹಿತಿ ಲಭಿಸಿತ್ತು. ಮಾಹಿತಿ ಆಧರಿಸಿ ಪೊಲೀಸರು ಸ್ಥಳಕ್ಕೆ ದಾಳಿ ನಡೆಸಿದ ವೇಳೆ ಆರೋಪಿಗಳು ಜೂಜಾಟದಲ್ಲಿ ತೊಡಗಿರುವುದು ಪತ್ತೆಯಾಯಿತು.ಅರಸಾಳು ಗ್ರಾಮದ ಜಯರಾಮ್ ಅವರ ಗದ್ದೆಯ ಪಕ್ಕದ ನೀಲಗಿರಿ ತೋಟದಲ್ಲಿ ಅಕ್ರಮವಾಗಿ ಇಸ್ಪೀಟು ಜೂಜಾಟ ನಡೆಯುತ್ತಿರುವ ಖಚಿತ ಮಾಹಿತಿಯ ಮೇರೆಗೆ ರಿಪ್ಪನ್‌ಪೇಟೆ ಪೊಲೀಸ್ ಠಾಣೆಯ ಪಿಎಸ್‌ಐ ರಾಜು ರೆಡ್ಡಿ ನೇತೃತ್ವದ ತಂಡ ದಾಳಿ ನಡೆಸಿ 9 ಮಂದಿಯನ್ನು ಬಂಧಿಸಿದೆ.
ದಾಳಿಯ ವೇಳೆ ಪೊಲೀಸರು 52 ಇಸ್ಪೀಟು ಎಲೆಗಳು, ₹3,110 ನಗದು ಹಣ, ಒಂದು ಪ್ಲಾಸ್ಟಿಕ್ ಪಾರ್ಸೆಲ್ ಹಾಗೂ ಒಂದು ಬೆಡ್‌ಶೀಟ್ ಅನ್ನು ವಶಪಡಿಸಿಕೊಂಡಿದ್ದಾರೆ.ಈ ಸಂಬಂಧ ರಿಪ್ಪನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.ಪಿಎಸ್‌ಐ ರಾಜು ರೆಡ್ಡಿ ನೇತೃತ್ವದಲ್ಲಿ ವಿಶ್ವನಾಥ್, ಮಂಜುನಾಥ್ ಎಚ್. ಸೇರಿದಂತೆ ಪೊಲೀಸ್ ಸಿಬ್ಬಂದಿ ದಾಳಿಯಲ್ಲಿ ಭಾಗವಹಿಸಿದ್ದು, ಕಾರ್ಯಾಚರಣೆಯನ್ನು ಯಶಸ್ವಿಯಾಗಿ ನಡೆಸಿದ್ದಾರೆ.