ಅಡಿಕೆ ತೋಟದಲ್ಲಿ ದುರ್ಘಟನೆ: ವಿದ್ಯುತ್ ಸ್ಪರ್ಶಕ್ಕೆ ರೈತ ಬಲಿ

Posted by

ಅಡಿಕೆ ತೋಟದಲ್ಲಿ ದುರ್ಘಟನೆ: ವಿದ್ಯುತ್ ಸ್ಪರ್ಶಕ್ಕೆ ರೈತ ಬಲಿಸಾಗರ ತಾಲೂಕಿನ ಆನಂದಪುರ ಹೋಬಳಿಯ ತ್ಯಾಗರ್ತಿ ಗ್ರಾಮದಲ್ಲಿ ಇಂದು ಬೆಳಿಗ್ಗೆ ನಡೆದ ದುರಂತ ಘಟನೆಯಲ್ಲಿ ರೈತರೊಬ್ಬರು ವಿದ್ಯುತ್ ಸ್ಪರ್ಶಕ್ಕೆ ಸಾವನ್ನಪ್ಪಿದ್ದಾರೆ.ಮೃತರನ್ನು ತ್ಯಾಗರ್ತಿ ಗ್ರಾಮದ ನಿವಾಸಿ ಸುರೇಶ್ ಪಿ. (49) ಎಂದು ಗುರುತಿಸಲಾಗಿದೆ. ಅವರು ತಮ್ಮ ಅಡಿಕೆ ತೋಟಕ್ಕೆ ನೀರು ಹಾಯಿಸಲು ಪಂಪ್‌ಸೆಟ್ ಚಾಲನೆ ಮಾಡಲು ತೆರಳಿದ್ದ ವೇಳೆ ಅಕಸ್ಮಿಕವಾಗಿ ವಿದ್ಯುತ್ ತಗುಲಿ ಸ್ಥಳದಲ್ಲೇ ಕುಸಿದು ಬಿದ್ದಿದ್ದಾರೆ.

ತಕ್ಷಣವೇ ಸ್ಥಳೀಯರು ಅವರನ್ನು ಸಾಗರ ಸರ್ಕಾರಿ ಆಸ್ಪತ್ರೆಗೆ ಸಾಗಿಸಿದರೂ, ಅಷ್ಟರಲ್ಲೇ ಅವರು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.ಈ ಘಟನೆ ಗ್ರಾಮದಲ್ಲಿ ಶೋಕಸಾಗರವನ್ನುಂಟು ಮಾಡಿದ್ದು, ಕುಟುಂಬಸ್ಥರ ಅಳಲು ಮನಕಲಕುವಂತಿದೆ.ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ಶಾಸಕ ಗೋಪಾಲಕೃಷ್ಣ ಬೇಳೂರು ಅವರು ಮೃತರ ನಿವಾಸಕ್ಕೆ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ದುಡಿಯುವ ರೈತನಿಗೆ ಈ ರೀತಿಯ ಅನಿರೀಕ್ಷಿತ ಅಂತ್ಯ ಸಂಭವಿಸಿರುವುದು ಅತ್ಯಂತ ದುಃಖಕರ ಎಂದರು.ಮೃತರ ಕುಟುಂಬದ ಸಂಕಷ್ಟವನ್ನು ಮನಗಂಡು, ಸರ್ಕಾರದಿಂದ ದೊರೆಯಬೇಕಾದ ಗರಿಷ್ಠ ಪರಿಹಾರವನ್ನು ಶೀಘ್ರದಲ್ಲೇ ನೀಡಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ತಿಳಿಸಿದ್ದಾರೆ.ಈ ದುರಂತ ಘಟನೆ ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದ್ದು, ವಿದ್ಯುತ್ ಸುರಕ್ಷತೆ ಕುರಿತು ಹೆಚ್ಚಿನ ಎಚ್ಚರಿಕೆ ಅಗತ್ಯವಿದೆ ಎಂಬ ಮಾತು ಕೇಳಿಬರುತ್ತಿದೆ.

Leave a Reply

Your email address will not be published. Required fields are marked *