
ಹೆದ್ದಾರಿಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಳವಳ್ಳಿ ಗ್ರಾಮದ ರೈತ ಸೋಮಣ್ಣ ಅವರು ಪತ್ನಿಯೊಂದಿಗೆ ಡೈರಿಗೆ ಹಾಲು ಸಾಗಿಸುವ ವೇಳೆ ಸಂಭವಿಸಿದ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಒಂದು ಕಾಲು ಕಳೆದುಕೊಂಡಿರುವ ಘಟನೆ ಸ್ಥಳೀಯರಲ್ಲಿ ವಿಷಾದ ಮೂಡಿಸಿದೆ.ಈ ದುರ್ಘಟನೆ ಸಂಭವಿಸಿದ ಸಂದರ್ಭದಲ್ಲಿ ಸೋಮಣ್ಣ ಅವರ ಕುಟುಂಬ ಮಗಳ ವಿವಾಹ ಸಿದ್ಧತೆಯಲ್ಲಿ ನಿರತರಾಗಿದ್ದು, ಏಕಾಏಕಿ ನಡೆದ ಈ ಘಟನೆ ಕುಟುಂಬವನ್ನು ಆರ್ಥಿಕ ಹಾಗೂ ಮಾನಸಿಕ ಸಂಕಷ್ಟಕ್ಕೆ ತಳ್ಳಿದೆ. ಕುಟುಂಬದ ಮೇಲೆ ದುಃಖದ ನೆರಳು ಆವರಿಸಿದೆ

.ಘಟನೆಯ ಮಾಹಿತಿ ತಿಳಿದ ಕೂಡಲೇ ರೈತ ಮುಖಂಡರು ಹಾಗೂ ಜನಪ್ರಿಯ ನಾಯಕರು ಆಗಿರುವ ಡಾ. ಆರ್. ಎಂ. ಮಂಜುನಾಥ್ ಗೌಡ ಅವರು ಸ್ಥಳಕ್ಕೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಸಂಕಷ್ಟದ ಈ ಘಟ್ಟದಲ್ಲಿ ತಮ್ಮಿಂದಾದ ಆರ್ಥಿಕ ನೆರವನ್ನು ಒದಗಿಸಿ, ಧೈರ್ಯ ತುಂಬಿದರು. ಅಲ್ಲದೆ ಜಿಲ್ಲಾ ಹಾಲು ಒಕ್ಕೂಟದ ಅಧ್ಯಕ್ಷರಾದ ಗುರುಶಕ್ತಿ ವಿದ್ಯಾಧರ್ ಹಾಗೂ ಸ್ಥಳೀಯ ಮಹಿಳಾ ಹಾಲು ಮಾರಾಟಗಾರರ ಸಂಘದಿಂದಲೂ ಸಹಾಯಧನ ನೀಡಲಾಯಿತು.ಈ ಸಂದರ್ಭದಲ್ಲಿ ಹೊಸನಗರ ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಎಂ.ಎಂ. ಪರಮೇಶ್ವರ, ಮಾಜಿ ಗ್ರಾಮ ಪಂಚಾಯಿತಿ ಸದಸ್ಯರಾದ ಶಣ್ಮುಖ, ಜಿಲ್ಲಾ ಯುವ ಕಾಂಗ್ರೆಸ್ ಹಿಂದೂಳಿದ ವರ್ಗಗಳ ವಿಭಾಗದ ಪ್ರಧಾನ ಕಾರ್ಯದರ್ಶಿ ಕುರುವಳ್ಳಿ ನಾಗರಾಜ್, ಹೆದ್ದಾರಿಪುರದ ಕಾಂಗ್ರೆಸ್ ಮುಖಂಡರಾದ ಅಭಿ ಶೆಟ್ಟಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ಜೊತೆಗೆ ಸ್ಥಳೀಯ ಮಹಿಳಾ ಹಾಲು ಉತ್ಪಾದಕರ ಮಾರಾಟಗಾರರ ಸಂಘದ ಅಧ್ಯಕ್ಷೆ ಆರ್ಚನ ಅಭಿಶೆಟ್ಟಿ, ಕಾರ್ಯದರ್ಶಿ ಶಾಂತಮ್ಮ ಹಾಗೂ ಇತರ ಪದಾಧಿಕಾರಿಗಳು ಸಹ ಭಾಗವಹಿಸಿದ್ದರು.ಈ ಸಂದರ್ಭದಲ್ಲಿ ಮಾತನಾಡಿದ ಡಾ. ಆರ್. ಎಂ. ಮಂಜುನಾಥ್ ಗೌಡ ಅವರು, “ರೈತರು ಎದುರಿಸುವ ಸಂಕಷ್ಟದ ಹೊತ್ತಿನಲ್ಲಿ ಸಮಾಜ ಒಗ್ಗಟ್ಟಿನಿಂದ ಬೆಂಬಲ ನೀಡುವುದು ಅತ್ಯಂತ ಅಗತ್ಯ. ಸೋಮಣ್ಣ ಅವರ ಕುಟುಂಬದೊಂದಿಗೆ ನಾವು ಸದಾ ಇರುತ್ತೇವೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.ಈ ಘಟನೆ ಗ್ರಾಮದಲ್ಲಿ ಕಳವಳ ಮೂಡಿಸಿದ್ದು, ಮಾನವೀಯತೆ ಹಾಗೂ ಸಹಾನುಭೂತಿಯ ಮೌಲ್ಯಗಳನ್ನು ಮತ್ತೊಮ್ಮೆ ನೆನಪಿಸಿದೆ.
i



Leave a Reply