ಮೇ 2:ಆನಂದಪುರದ ಸುಳಗೋಡು ಗ್ರಾಮದಲ್ಲಿ ಹಾವು ಕಚ್ಚಿದ ಪರಿಣಾಮ 26 ವರ್ಷದ ಯುವತಿ ಮೃತಪಟ್ಟಿರುವ ದುರ್ಘಟನೆ ನಡೆದಿದೆ.ಮೃತರನ್ನು ಸ್ವಾತಿ (26) ಎಂದು ಗುರುತಿಸಲಾಗಿದ್ದು, ಅವರು ವೀರಭದ್ರ ಅವರ ಪತ್ನಿಯಾಗಿದ್ದಾರೆ. ನಿನ್ನೆ ಮಧ್ಯಾಹ್ನ ತೋಟಕ್ಕೆ ಕೆಲಸಕ್ಕೆ ತೆರಳಿದ್ದ ಸ್ವಾತಿ ಅವರು ಬಳಿಕ ಮನೆಗೆ ವಾಪಾಸಾಗಿದ್ದರು. ಕೆಲಸದ ನಂತರ ವಿಶ್ರಾಂತಿ ಪಡೆಯಲು ಕುರ್ಚಿಯ ಮೇಲೆ ಕುಳಿತಾಗ, ಕುರ್ಚಿ ಕೆಳಗಿದ್ದ ಹಾವು ಕಚ್ಚಿದೆಯೆಂದು ತಿಳಿದುಬಂದಿದೆ.ಘಟನೆಯ ಬಳಿಕ ಕುಟುಂಬಸ್ಥರು ತಕ್ಷಣವೇ ಸ್ವಾತಿ ಅವರನ್ನು ಆನಂದಪುರದ ಆಸ್ಪತ್ರೆಗೆ ಕರೆದೊಯ್ಯಲು ಪ್ರಯತ್ನಿಸಿದರೂ, ಮಾರ್ಗ ಮಧ್ಯೆ ಅವರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.ಈ ದುರ್ಘಟನೆ ಗ್ರಾಮದಲ್ಲಿ ಶೋಕ ವಾತಾವರಣವನ್ನು ಮೂಡಿಸಿದೆ. ಹಾವುಗಳ ಸಂಚರಣೆ ಹೆಚ್ಚುತ್ತಿರುವ ಹಿನ್ನೆಲೆ ಗ್ರಾಮಸ್ಥರು ಎಚ್ಚರಿಕೆ ವಹಿಸಬೇಕೆಂದು ಸ್ಥಳೀಯರು ಮನವಿ ಮಾಡಿದ್ದಾರೆ.

By Anjan Kerehalli

ಮಲ್ನಾಡ್ ಸುದ್ದಿ ಎಕ್ಸ್ಪ್ರೆಸ್ – ನಮ್ಮ ಧ್ವನಿ, ನಿಮ್ಮ ಹಕ್ಕು ಮಲ್ಲಾಡ್ ಸುದ್ದಿ ಎಕ್ಸ್ಪ್ರೆಸ್ ದು ಮಲೆನಾಡ ಜನರ ಧ್ವನಿ “ನಮ್ಮ ಮಲ್ನಾಡ್ ಸುದ್ದಿ ಎಕ್ಸ್ಪ್ರೆಸ್ – ಜನರೊಂದಿಗೆ, ಜನರಿಗಾಗಿ.”

Leave a Reply

Your email address will not be published. Required fields are marked *