ಮಾನಸ ಅವರು ಪಟ್ಟಣದ ರವಿ ಹೆಚ್ ಹಾಗೂ ವಾಣಿ ಕೆ ಎಸ್ ದಂಪತಿಗಳ ಪುತ್ರಿ. ಗ್ರಾಮೀಣ ಹಿನ್ನೆಲೆಯಲ್ಲಿದ್ದರೂ ಶಿಕ್ಷಣದ ಕಡೆ ಹೆಚ್ಚಿನ ಒಲವು ತೋರಿದ ಅವರು, 625ರಲ್ಲಿ 610 ಅಂಕಗಳನ್ನು ಪಡೆದು ಅತ್ಯುತ್ತಮ ಸಾಧನೆ ಮಾಡಿದ್ದಾರೆ.ವಿಷಯವಾರು ಅಂಕಗಳಲ್ಲಿ ಮಾನಸ ಕನ್ನಡದಲ್ಲಿ 125, ಇಂಗ್ಲಿಷ್‌ನಲ್ಲಿ 99, ಹಿಂದಿಯಲ್ಲಿ 99, ಗಣಿತದಲ್ಲಿ 97, ವಿಜ್ಞಾನದಲ್ಲಿ 90 ಹಾಗೂ ಸಮಾಜ ವಿಜ್ಞಾನದಲ್ಲಿ 90 ಅಂಕಗಳನ್ನು ಗಳಿಸಿದ್ದಾರೆ. ಈ ಸಾಧನೆಯ ಮೂಲಕ ಅವರು ಶಾಲೆಯ ಗೌರವವನ್ನು ಮತ್ತಷ್ಟು ಹೆಚ್ಚಿಸಿದ್ದಾರೆ.ಈ ಸಂದರ್ಭದಲ್ಲಿ ಶಾಲೆಯ ಆಡಳಿತ ಮಂಡಳಿ, ಸಾಗರ–ಹೊಸನಗರ ಕ್ಷೇತ್ರದ ಶಾಸಕ ಹಾಗೂ ಅರಣ್ಯ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಬೇಳೂರು ಗೋಪಾಲಕೃಷ್ಣ, ತಾಲೂಕು ಆರ್ಯ ಈಡಿಗರ ಸಂಘದ ಪ್ರತಿನಿಧಿಗಳು, ಹಾಗೂ ಶ್ರೀ ನಾರಾಯಣ ಗುರು ಮಲೆನಾಡು ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಜಿ.ಇ. ಮುರಳಿಧರ ಅವರು ಮಾನಸ ಅವರನ್ನು ಅಭಿನಂದಿಸಿದರು.ಕುಮಾರಿ ಮಾನಸ ಅವರ ಸಾಧನೆಗೆ ಎಲ್ಲರೂ ಶುಭಾಶಯ ತಿಳಿಸಿ, ಅವರ ಭವಿಷ್ಯ ಇನ್ನಷ್ಟು ಉಜ್ವಲವಾಗಲೆಂದು ಹಾರೈಸಿದರು.

By Anjan Kerehalli

ಮಲ್ನಾಡ್ ಸುದ್ದಿ ಎಕ್ಸ್ಪ್ರೆಸ್ – ನಮ್ಮ ಧ್ವನಿ, ನಿಮ್ಮ ಹಕ್ಕು ಮಲ್ಲಾಡ್ ಸುದ್ದಿ ಎಕ್ಸ್ಪ್ರೆಸ್ ದು ಮಲೆನಾಡ ಜನರ ಧ್ವನಿ “ನಮ್ಮ ಮಲ್ನಾಡ್ ಸುದ್ದಿ ಎಕ್ಸ್ಪ್ರೆಸ್ – ಜನರೊಂದಿಗೆ, ಜನರಿಗಾಗಿ.”

Leave a Reply

Your email address will not be published. Required fields are marked *