ಹೊಸನಗರ : ಪಟ್ಟಣದ ಹೋಲಿ ರಿಡೀಮರ್ ಪದವಿ ಪೂರ್ವ ಕಾಲೇಜು ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಶೇಕಡ 100 ಸಾಧನೆ ಮಾಡಿ ಗಮನಸೆಳೆದಿದೆ. ಪರೀಕ್ಷೆಗೆ ಹಾಜರಾಗಿದ್ದ ಒಟ್ಟು 80 ವಿದ್ಯಾರ್ಥಿಗಳೂ ಯಶಸ್ವಿಯಾಗಿ ಉತ್ತೀರ್ಣರಾಗಿದ್ದು, ಕಾಲೇಜಿನ ಶೈಕ್ಷಣಿಕ ಮಟ್ಟವನ್ನು ಮತ್ತೊಮ್ಮೆ ದೃಢಪಡಿಸಿದೆ.ಈ ಬಾರಿ ಫಲಿತಾಂಶದಲ್ಲಿ ಬಾಲಕಿಯರು ಮೇಲುಗೈ ಸಾಧಿಸಿದ್ದು, 46 ಬಾಲಕಿಯರು ಹಾಗೂ 34 ಬಾಲಕರು ಉತ್ತೀರ್ಣರಾಗಿದ್ದಾರೆ.ವಿಭಾಗವಾರು ಸಾಧನೆ ಗಮನಾರ್ಹವಾಗಿದ್ದು, ಕಾಮರ್ಸ್ ವಿಭಾಗದಲ್ಲಿ ಇಎಸ್ ಸಾನಿಕಾ 600ರಲ್ಲಿ 588 ಅಂಕಗಳನ್ನು ಪಡೆದು ಶೇಕಡ 98 ಅಂಕಗಳೊಂದಿಗೆ ಶ್ರೇಷ್ಠ ಸಾಧನೆ ಮಾಡಿದ್ದಾರೆ. ಕಲಾ ವಿಭಾಗದಲ್ಲಿ ಎಂ.ಜಿ. ಶಮಿತಾ 600ರಲ್ಲಿ 582 ಅಂಕಗಳನ್ನು ಗಳಿಸಿ ಶೇಕಡ 97 ಅಂಕಗಳೊಂದಿಗೆ ಮಿಂಚಿದ್ದಾರೆ. ವಿಜ್ಞಾನ ವಿಭಾಗದಲ್ಲಿ ಎಂ.ಎನ್. ಅನನ್ಯ 600ರಲ್ಲಿ 581 ಅಂಕಗಳನ್ನು ಪಡೆದು ಕಾಲೇಜಿನ ಪ್ರಮುಖ ಸಾಧಕರಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದಾರೆ.ವಿದ್ಯಾರ್ಥಿಗಳ ಈ ಸಾಧನೆಗೆ ಶಿಕ್ಷಕ ವರ್ಗ ಹಾಗೂ ಪೋಷಕರ ಮಾರ್ಗದರ್ಶನ ಮಹತ್ವದ ಪಾತ್ರವಹಿಸಿದೆ ಎಂದು ಕಾಲೇಜು ಆಡಳಿತ ಮಂಡಳಿ ಸಂತೋಷ ವ್ಯಕ್ತಪಡಿಸಿದೆ.

By Anjan Kerehalli

ಮಲ್ನಾಡ್ ಸುದ್ದಿ ಎಕ್ಸ್ಪ್ರೆಸ್ – ನಮ್ಮ ಧ್ವನಿ, ನಿಮ್ಮ ಹಕ್ಕು ಮಲ್ಲಾಡ್ ಸುದ್ದಿ ಎಕ್ಸ್ಪ್ರೆಸ್ ದು ಮಲೆನಾಡ ಜನರ ಧ್ವನಿ “ನಮ್ಮ ಮಲ್ನಾಡ್ ಸುದ್ದಿ ಎಕ್ಸ್ಪ್ರೆಸ್ – ಜನರೊಂದಿಗೆ, ಜನರಿಗಾಗಿ.”

Leave a Reply

Your email address will not be published. Required fields are marked *