
ಸಮಾಜದಲ್ಲಿ ಇನ್ನೂ ಕೆಲವರು ಅಂಗವಿಕಲರನ್ನು ಹೀಯಾಳಿಸುವುದು, ಅವಹೇಳನಕಾರಿ ಪದಗಳಿಂದ ಕರೆದಾಡುವುದು ನಡೆಯುತ್ತಿದ್ದು, ಇದು ಕಾನೂನು ಪ್ರಕಾರ ಗಂಭೀರ ಅಪರಾಧವಾಗಿದೆ.
ವಿಶೇಷವಾಗಿ ಗ್ರಾಮೀಣ ಭಾಗಗಳಲ್ಲಿ “ಕುಂಟ”, “ಕುರುಡ” ಮುಂತಾದ ಪದಗಳನ್ನು ಬಳಸಿ ನಿಂದಿಸುವ ಘಟನೆಗಳು ಹೆಚ್ಚಾಗುತ್ತಿರುವುದು
ಚಿಂತಾಜನಕವಾಗಿದೆ.ಅಂಗವಿಕಲರನ್ನು ಈ ರೀತಿಯಾಗಿ ಕರೆಯುವುದು ಅವರ ಮಾನಸಿಕ ಸ್ಥಿತಿಗೆ ಭಾರೀ ನೋವು ಉಂಟುಮಾಡುತ್ತದೆ. ಇಂತಹ ಪದಗಳು ಅವರ ಆತ್ಮಗೌರವಕ್ಕೆ ಧಕ್ಕೆ ತರುತ್ತದೆ ಮತ್ತು ಸಮಾಜದಿಂದ ದೂರವಾಗುವಂತೆ ಮಾಡುತ್ತದೆ.
ಕೆಲವರು ಇದರಿಂದ ಮಾನಸಿಕ ಒತ್ತಡಕ್ಕೆ ಒಳಗಾಗಿ ಆತ್ಮವಿಶ್ವಾಸ ಕಳೆದುಕೊಳ್ಳುವ ಸಾಧ್ಯತೆ ಇದೆ.ಭಾರತ ಸರ್ಕಾರ ಜಾರಿಗೆ ತಂದಿರುವ ಅಂಗವಿಕಲರ ಹಕ್ಕುಗಳ ಕಾಯ್ದೆ, 2016 ಪ್ರಕಾರ, ಅಂಗವಿಕಲರಿಗೆ ಅವಮಾನ ಮಾಡುವ, ನಿಂದಿಸುವ ಅಥವಾ ಭೇದಭಾವ ತೋರಿಸುವವರಿಗೆ ಕಠಿಣ ಶಿಕ್ಷೆ ವಿಧಿಸಲಾಗುತ್ತದೆ.
ಈ ಕಾಯ್ದೆಯಡಿ ತಪ್ಪಿತಸ್ಥರಿಗೆ :
• ಐದು ವರ್ಷಗಳವರೆಗೆ ಜೈಲು ಶಿಕ್ಷೆ
•ದಂಡ
•ಅಥವಾ ಎರಡೂ ಶಿಕ್ಷೆಗಳು ವಿಧಿಸಲಾಗಬಹುದುಎಂದು ಕಾನೂನು ಸ್ಪಷ್ಟಪಡಿಸುತ್ತದೆ.
ಸಾಮಾಜಿಕ ನ್ಯಾಯ ತಜ್ಞರ ಪ್ರಕಾರ, ಅಂಗವಿಕಲರನ್ನು ಗೌರವದಿಂದ ವರ್ತಿಸುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ. ಅವರು ಸಹ ಸಮಾಜದ ಸಮಾನ ಹಕ್ಕುಗಳನ್ನು ಹೊಂದಿರುವ ವ್ಯಕ್ತಿಗಳಾಗಿದ್ದು, ಅವರೊಂದಿಗೆ ಮಾನವೀಯತೆಯಿಂದ ನಡೆದುಕೊಳ್ಳಬೇಕು.
ಸರ್ಕಾರ ಹಾಗೂ ಸಾಮಾಜಿಕ ಸಂಘಟನೆಗಳು ಜನರಲ್ಲಿ ಜಾಗೃತಿ ಮೂಡಿಸಲು ಕ್ರಮ ಕೈಗೊಳ್ಳುತ್ತಿದ್ದು, ಇಂತಹ ಅವಹೇಳನಕಾರಿ ವರ್ತನೆಗಳನ್ನು ತಡೆಯಲು ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. “ಅಂಗವಿಕಲತೆ ದೌರ್ಬಲ್ಯವಲ್ಲ – ಗೌರವದಿಂದ ವರ್ತಿಸುವುದು ನಮ್ಮ ಹೊಣೆಗಾರಿಕೆ.



Leave a Reply