ಶಾಂತಪುರ ಬಸ್ ನಿಲ್ದಾಣದ ಬಳಿ ಗಾಂಜಾ ಸೇವನೆ: ವ್ಯಕ್ತಿ ವಿರುದ್ಧ ಪ್ರಕರಣ ದಾಖಲು

ದಿನಾಂಕ 18/03/2026 ರಂದು ಬೆಳಗ್ಗೆ ಶಾಂತಪುರ ಗ್ರಾಮದ ಬಸ್ ನಿಲ್ದಾಣದ ಸಮೀಪ ಅಸಭ್ಯವಾಗಿ ವರ್ತಿಸುತ್ತಿದ್ದ ವ್ಯಕ್ತಿಯೊಬ್ಬನನ್ನು ಪೊಲೀಸ್ ಸಿಬ್ಬಂದಿ ವಶಕ್ಕೆ ಪಡೆದ ಘಟನೆ ನಡೆದಿದೆ.

ಶಾಂತಪುರ ಬಸ್ ನಿಲ್ದಾಣದ ಬಳಿ ಗಾಂಜಾ ಸೇವನೆ: ವ್ಯಕ್ತಿ ವಿರುದ್ಧ ಪ್ರಕರಣ ದಾಖಲುದಿನಾಂಕ 18/03/2026 ರಂದು ಬೆಳಗ್ಗೆ ಶಾಂತಪುರ ಗ್ರಾಮದ ಬಸ್ ನಿಲ್ದಾಣದ ಸಮೀಪ ಅಸಭ್ಯವಾಗಿ ವರ್ತಿಸುತ್ತಿದ್ದ ವ್ಯಕ್ತಿಯೊಬ್ಬನನ್ನು ಪೊಲೀಸ್ ಸಿಬ್ಬಂದಿ ವಶಕ್ಕೆ ಪಡೆದ ಘಟನೆ ನಡೆದಿದೆ. ಠಾಣಾ ಸಿಬ್ಬಂದಿಗಳಾದ ಹೆಚ್‌ಸಿ 398 ರಾಮಚಂದ್ರಪ್ಪ ಮತ್ತು ಪಿಸಿ 1879 ವಿಶ್ವನಾಥ್ ಅವರು ತಮ್ಮ ನಿಯಮಿತ ಗಸ್ತಿನಲ್ಲಿದ್ದಾಗ ಈ ಘಟನೆ ಬೆಳಕಿಗೆ ಬಂದಿದೆ.

ಗಸ್ತು ಕಾರ್ಯನಿರ್ವಹಣೆ ವೇಳೆ, ವ್ಯಕ್ತಿಯೊಬ್ಬನು ಯಾವುದೋ ಅಮಲಿನ ಪದಾರ್ಥ ಸೇವಿಸಿ ಸಾರ್ವಜನಿಕ ಸ್ಥಳದಲ್ಲಿ ಅಸ್ಥಿರವಾಗಿ ನಡೆದುಕೊಳ್ಳುತ್ತಾ ಅಸಭ್ಯ ವರ್ತನೆ ಮಾಡುತ್ತಿರುವುದನ್ನು ಗಮನಿಸಿದ ಪೊಲೀಸರು, ತಕ್ಷಣ ಅವನನ್ನು ತಡೆದು ವಿಚಾರಣೆ ನಡೆಸಿದರು. ವಿಚಾರಣೆಯಲ್ಲಿ ಆತನು ತನ್ನನ್ನು ಮಹಮ್ಮದ್ ರಫೀಕ್ ಬಿನ್ ಹಸನ್ ಸಾಬ್ (54 ವರ್ಷ), ಚಾಲಕ ವೃತ್ತಿ, ಶಾಂತಪುರ ಗ್ರಾಮ, ಹೊಸನಗರ ತಾಲ್ಲೂಕು ನಿವಾಸಿ ಎಂದು ಪರಿಚಯಿಸಿಕೊಂಡನು.ಸದರಿಯ ವರ್ತನೆಯ ಆಧಾರದ ಮೇಲೆ ಗಾಂಜಾ ಸೇವನೆ ಮಾಡಿದ ಅನುಮಾನ ವ್ಯಕ್ತವಾದ ಕಾರಣ, ಪೊಲೀಸರು ಆತನನ್ನು ವಶಕ್ಕೆ ಪಡೆದು ಬೆಳಗ್ಗೆ 11:30 ಗಂಟೆಗೆ ಠಾಣೆಗೆ ಕರೆತಂದು ಠಾಣಾಧಿಕಾರಿಗಳ ಮುಂದೆ ಹಾಜರುಪಡಿಸಿದರು. ಬಳಿಕ, ಗಾಂಜಾ ಸೇವನೆ ದೃಢಪಡಿಸುವ ಉದ್ದೇಶದಿಂದ ಮನವಿ ಪತ್ರದೊಂದಿಗೆ ಹೊಸನಗರ ಸರ್ಕಾರಿ ಆಸ್ಪತ್ರೆಗೆ ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಯಿತು.

ವೈದ್ಯಕೀಯ ಪರೀಕ್ಷೆಯ ನಂತರ, ಸದರಿ ವ್ಯಕ್ತಿಯು ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿದೆ ಎಂದು ವೈದ್ಯರು ವರದಿ ನೀಡಿದ್ದಾರೆ. ಆ ವರದಿ ಹಾಗೂ ಆರೋಪಿತನನ್ನು ಮರು ಠಾಣೆಗೆ ಕರೆತಂದು ಹಾಜರುಪಡಿಸಿದ ಬಳಿಕ, ಘಟಶಾಂತಪುರದಲ್ಲಿ ಗಾಂಜಾ ಸೇವನೆ ಪ್ರಕರಣ”ನೆ ಕುರಿತು ಅಧಿಕೃತವಾಗಿ ಪ್ರಕರಣ ದಾಖಲಾಗಿದೆ.ಶಾಂತಪುರ ಬಸ್ ನಿಲ್ದಾಣದಂತಹ ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಸೇವನೆ ಮಾಡಿ ಅಸಭ್ಯವಾಗಿ ವರ್ತಿಸಿರುವುದು ದೃಢಪಟ್ಟಿರುವುದರಿಂದ, ಮಹಮ್ಮದ್ ರಫೀಕ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಶಾಂತಿ ಭದ್ರತೆಯನ್ನು ಕಾಪಾಡುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ತಕ್ಷಣ ಕ್ರಮ ಕೈಗೊಂಡಿದೆ.

ವರದಿ : ಕೆರೆಹಳ್ಳಿ ಅಂಜನ್

  • malnadsuddi36@gmail.com

    ಮಲ್ನಾಡ್ ಸುದ್ದಿ ಇದು ಕೇವಲ ಸುದ್ದಿ ವಾಹಿನಿಯಲ್ಲ ಮಲ್ನಾಡ್ ಸುದ್ದಿ ಇದು ಮಲೆನಾಡ ಜನರ ಧ್ವನಿ ಜನರೊಂದಿಗೆ ಸೇರಿ ಅನ್ಯಾಯದ ವಿರುದ್ಧ ಹೋರಾಡುವುದು ನಮ್ಮ ಮಲ್ನಾಡ್ ಸುದ್ದಿ ತಂಡ ನೈಜ್ಯ ಅಪರಾಧ. ಪ್ರಸ್ತುತ ರಾಜಕೀಯ. ಕ್ರೀಡೆ. ಸಾಂಸ್ಕೃತಿಕ ಕಾರ್ಯಕ್ರಮ. ಅನ್ಯಾಯದ ವಿರುದ್ಧ ಹೋರಾಟ. ಉಚಿತ ಕಾನೂನು ಸಲಹೆ. ಸಿನಿಮಾ ಸ್ಟೋರಿಗಳು. ಸರ್ಕಾರದ ಅನುದಾನಗಳ ಬಗ್ಗೆ ಸಮಗ್ರ ಮಾಹಿತಿ. ಒಟ್ಟಾರೆಯಾಗಿ ಸಮಾಜವನ್ನು ಸುಧಾರಿಸುವುದು ನಮ್ಮ ಮಲ್ನಾಡ್ ಸುದ್ದಿ ತಂಡದ ಗುರಿ

    Related Posts

    ರಿಪ್ಪನ್ ಪೇಟೆ: ಬೈಕ್–ಕಾರ್ ಡಿಕ್ಕಿ, ಸವಾರನಿಗೆ ಗಂಭೀರ ಗಾಯ

    ರಿಪ್ಪನ್ ಪೇಟೆ ಸಮೀಪದ ತೀರ್ಥಹಳ್ಳಿ ರಸ್ತೆಯಲ್ಲಿ ಇಂದು ಬೈಕ್ ಹಾಗೂ ಕಾರಿನ ನಡುವೆ ಭೀಕರ ಅಪಘಾತ ಸಂಭವಿಸಿದೆ. ರಸ್ತೆ ಬದಿಯಿಂದ ಅಡ್ಡಲಾಗಿ ಕಾರನ್ನು ತಿರುಗಿಸುವ ವೇಳೆ ಎದುರು ಬರುತ್ತಿದ್ದ ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ನಡೆದಿದೆ. ಅಪಘಾತದಲ್ಲಿ ಬೈಕ್…

    ಕೊಳವಳ್ಳಿ ಗ್ರಾಮದಲ್ಲಿ ಯುವಕ ಆತ್ಮಹತ್ಯೆಕಬಡ್ಡಿ ಆಟಗಾರ ಸುನೀಲ್ ದುರ್ಮರಣ…!!

    ರಿಪ್ಪನ್ ಪೇಟೆ ಸಮೀಪದ ಕೊಳವಳ್ಳಿ ಗ್ರಾಮದಲ್ಲಿ ಯುವಕನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಗುರುವಾರ ವರದಿಯಾಗಿದೆ.ಮೃತ ಯುವಕನನ್ನು ಕೊಳವಳ್ಳಿ ಗ್ರಾಮದ ಸುನೀಲ್ ಬಿನ್ ವೀರಭದ್ರ (23) ಎಂದು ಗುರುತಿಸಲಾಗಿದೆ. ಬುಧವಾರ ಸಂಜೆ ಕೆಲಸ ಮುಗಿಸಿಕೊಂಡು ಮನೆಗೆ ಬಂದ ಸುನೀಲ್, ನಂತರ…

    Leave a Reply

    Your email address will not be published. Required fields are marked *

    You Missed

    ರಿಪ್ಪನ್ ಪೇಟೆ: ಬೈಕ್–ಕಾರ್ ಡಿಕ್ಕಿ, ಸವಾರನಿಗೆ ಗಂಭೀರ ಗಾಯ

    ಕೊಳವಳ್ಳಿ ಗ್ರಾಮದಲ್ಲಿ ಯುವಕ ಆತ್ಮಹತ್ಯೆಕಬಡ್ಡಿ ಆಟಗಾರ ಸುನೀಲ್ ದುರ್ಮರಣ…!!

    6–9 ಮೊಬೈಲ್ ವೀಕ್ಷಣೆ ಬ್ಯಾನ್ ಡಂಗುರ: ಮಕ್ಕಳಿಗೆ ಅಲ್ಲ, ತಂದೆತಾಯಿಗಳಿಗೆ ಮೊದಲು ನಿಯಮ

    ಒಕ್ಕನೆ ಬಾವಿ ಗ್ರಾಮದಲ್ಲಿ ಅರಣ್ಯ ಇಲಾಖೆಯ ವಿರುದ್ಧ ಅಹೋರಾತ್ರಿ ಧರಣಿ

    ರಿಪ್ಪನ್‌ಪೇಟೆಯಲ್ಲಿ ಅಡಿಕೆ ಖರೀದಿ ಕೇಂದ್ರ ಉದ್ಘಾಟನೆ

    ನಕಲಿ ಬಂಗಾರ ನೀಡಿ ವಂಚನೆ- ಮಹಿಳೆ ಬಂಧನ