ರಿಪ್ಪನಪೇಟೆ: ಕನ್ನಡ ರಾಜ್ಯೋತ್ಸವದ ಆಚರಣೆಯ ಸಂದರ್ಭದಲ್ಲಿ ಲಾಟರಿ ಯೋಜನೆ ನಡೆಸಿ ಬಹುಮಾನ ನೀಡುವುದಾಗಿ ಭರವಸೆ ನೀಡಿ ಸಾರ್ವಜನಿಕರಿಂದ ಹಣ ಸಂಗ್ರಹಿಸಿ ಆರೋಪ ಕೇಳಿಬಂದಿದೆ.
ಸಾಂಸ್ಕೃತಿಕ ಕಾರ್ಯಕ್ರಮದ ಹೆಸರಿನಲ್ಲಿ ಲಾಟರಿ ಕೂಪನ್‌ಗಳನ್ನು ಮಾರಾಟ ಮಾಡಿ, ಆಕರ್ಷಕ ಬಹುಮಾನಗಳ ಭರವಸೆ ನೀಡಿದ್ದರು. ಗ್ರಾಮಾಂತರ ಪ್ರದೇಶಗಳ ಜನರಿಂದ ಹೆಚ್ಚಿನ ಪ್ರಮಾಣದಲ್ಲಿ ಹಣ ಸಂಗ್ರಹಿಸಿದ್ದಾಗಿ ತಿಳಿದುಬಂದಿದೆ.


ಕಲಾಕೌಸ್ತುಭ ಸಂಘ ಎಂಬ ಹೆಸರಿನಲ್ಲಿ ಸುಮಾರು 100 ರೂ. ಟಿಕೆಟ್‌ಗಳನ್ನು ಮಾರಾಟ ಮಾಡಲಾಗಿದ್ದು, ಹಲವು ಜನರು ಭಾಗವಹಿಸಿದ್ದರು. ಆದರೆ, 2025ರ ನವೆಂಬರ್ 3ರಂದು ಡ್ರಾ ನಡೆಸುವುದಾಗಿ ಹೇಳಿದ್ದರೂ, ಬಳಿಕ ಯಾವುದೇ ಮಾಹಿತಿ ನೀಡದೆ ಸಂಘದ ಸದಸ್ಯರು ಸಾರ್ವಜನಿಕರಿಗೆ. ಮೋಸ ಮಾಡಿದ್ದಾರೆ ಎಂದು ದೂರಿದ್ದಾರೆ ನಿಗದಿತ ಸಮಯಕ್ಕೆ ಲಾಟರಿ ಡ್ರಾ ಪ್ರಕ್ರಿಯೆ ನಡೆಸದೆ ಮೋಸ ಮಾಡಿದ್ದಾರೆ
ಇದರಿಂದ ವಂಚನೆಗೆ ಒಳಗಾದ ಜನರು ಪೊಲೀಸ್ ಠಾಣೆಗೆ ದೂರು ನೀಡಲು ಮುಂದಾಗಿದ್ದು, ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

ವರದಿ : ಗಣೇಶ್ ರಿಪ್ಪನ್ ಪೇಟೆ

By Anjan Kerehalli

ಮಲ್ನಾಡ್ ಸುದ್ದಿ ಎಕ್ಸ್ಪ್ರೆಸ್ – ನಮ್ಮ ಧ್ವನಿ, ನಿಮ್ಮ ಹಕ್ಕು ಮಲ್ಲಾಡ್ ಸುದ್ದಿ ಎಕ್ಸ್ಪ್ರೆಸ್ ದು ಮಲೆನಾಡ ಜನರ ಧ್ವನಿ “ನಮ್ಮ ಮಲ್ನಾಡ್ ಸುದ್ದಿ ಎಕ್ಸ್ಪ್ರೆಸ್ – ಜನರೊಂದಿಗೆ, ಜನರಿಗಾಗಿ.”

Leave a Reply

Your email address will not be published. Required fields are marked *