ರಿಪ್ಪನಪೇಟೆ: ಸಮೀಪ ಬೊಲೆರೋ ಪಿಕ್‌ಅಪ್ ಪಲ್ಟಿ – ಅದೃಷ್ಟವಶಾತ್ ಯಾವುದೇ ಗಾಯಗಳಿಲ್ಲ
ರಿಪ್ಪನಪೇಟೆ: ಹೊಸನಗರದಿಂದ ಶಿವಮೊಗ್ಗ ಕಡೆಗೆ ಮರದ ಕಟ್ಟಿಗೆ (ಪೋಲ್ಸ್) ತುಂಬಿಕೊಂಡು ತೆರಳುತ್ತಿದ್ದ ಬೊಲೆರೋ ಪಿಕ್‌ಅಪ್ ವಾಹನವು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಗದ್ದೆಗೆ ಉರುಳಿದ ಘಟನೆ ರಿಪ್ಪನಪೇಟೆ ಸಮೀಪದ ದೂನ ಪ್ರದೇಶದಲ್ಲಿ ನಡೆದಿದೆ.
KA 16 AB 1316 ಸಂಖ್ಯೆಯ ಬೊಲೆರೋ ಪಿಕ್‌ಅಪ್ ವಾಹನವು ವೇಗವಾಗಿ ಸಾಗುತ್ತಿದ್ದ ವೇಳೆ ಏಕಾಏಕಿ ನಿಯಂತ್ರಣ ತಪ್ಪಿದ ಪರಿಣಾಮ ರಸ್ತೆ ಬದಿಗೆ ಜಾರಿಬಿದ್ದು ಗದ್ದೆಯಲ್ಲಿ ಪಲ್ಟಿಯಾಗಿದೆ ಎಂದು ತಿಳಿದುಬಂದಿದೆ. ಘಟನೆಯ ಸಮಯದಲ್ಲಿ ವಾಹನದಲ್ಲಿ ಮರದ ಕಟ್ಟಿಗೆ (ಪೋಲ್ಸ್) ತುóಬಿಕೊಂಡಿದ್ದವು.
ಅದೃಷ್ಟವಶಾತ್ ಈ ಅಪಘಾತದಲ್ಲಿ ಯಾರಿಗೂ ಯಾವುದೇ ರೀತಿಯ ಗಾಯಗಳಾಗಿಲ್ಲ ಎಂದು ಸ್ಥಳೀಯ ಮೂಲಗಳು ತಿಳಿಸಿವೆ. ಘಟನೆ ನಡೆದ ತಕ್ಷಣ ಸ್ಥಳೀಯರು ಸ್ಥಳಕ್ಕೆ ಧಾವಿಸಿ ಸಹಾಯ ಮಾಡಿದ್ದಾರೆ. ವಾಹನಕ್ಕೆ ಸ್ವಲ್ಪ ಪ್ರಮಾಣದ ಹಾನಿಯಾಗಿರುವುದು ಕಂಡುಬಂದಿದೆ.


ವರದಿ: ಗಣೇಶ್, ರಿಪ್ಪನಪೇಟೆ

By Anjan Kerehalli

ಮಲ್ನಾಡ್ ಸುದ್ದಿ ಎಕ್ಸ್ಪ್ರೆಸ್ – ನಮ್ಮ ಧ್ವನಿ, ನಿಮ್ಮ ಹಕ್ಕು ಮಲ್ಲಾಡ್ ಸುದ್ದಿ ಎಕ್ಸ್ಪ್ರೆಸ್ ದು ಮಲೆನಾಡ ಜನರ ಧ್ವನಿ “ನಮ್ಮ ಮಲ್ನಾಡ್ ಸುದ್ದಿ ಎಕ್ಸ್ಪ್ರೆಸ್ – ಜನರೊಂದಿಗೆ, ಜನರಿಗಾಗಿ.”

Leave a Reply

Your email address will not be published. Required fields are marked *