ಹಿಂದೂ ಜಾಗೃತಿಯಿಂದ ಭಾರತ ವಿಶ್ವಗುರು ಸ್ಥಾನಕ್ಕೇರಿದೆ: ಅಶ್ವಥ್ ಕುಮಾರ್

ಹುಂಚ: ವ್ಯಕ್ತಿಯ ಸಕಾರಾತ್ಮಕ ರೂಪಗೊಳಿಸುವಿಕೆಯಿಂದಲೇ ರಾಷ್ಟ್ರದ ಅಭಿವೃದ್ಧಿ ಸಾಧ್ಯ ಎಂಬ ತತ್ವವೇ ಹಿಂದೂ ಸಮಾಜವನ್ನು ಜಾಗೃತಗೊಳಿಸಿ ಭಾರತವನ್ನು ವಿಶ್ವಗುರುವನ್ನಾಗಿಸಿದೆ ಎಂದು ಆರ್‌ಎಸ್‌ಎಸ್ ತಾಲೂಕು ಕಾರ್ಯವಾಹ ಅಶ್ವಥ್ ಕುಮಾರ್ ಹೇಳಿದರು.

ಹುಂಚ ಮಂಡಲದಲ್ಲಿ ಶನಿವಾರ ನಡೆದ ಹಿಂದೂ ಸಂಗಮ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು, ಹಿಂದೂ ಸಮಾಜವು ಜಗತ್ತಿನ ಅತಿ ಪುರಾತನ ಸಮಾಜದೊಂದಿಗೆ “ವಸುದೈವ ಕುಟುಂಬಕಂ” ಎಂಬ ಸಮಗ್ರ ಮಾನವೀಯ ಸಂದೇಶವನ್ನು ಜಗತ್ತಿಗೆ ನೀಡಿದ ಸಂಸ್ಕೃತಿ ನಮ್ಮದು ಎಂದು ಅಭಿಪ್ರಾಯಪಟ್ಟರು.

ಸಂಘದ ಶತಮಾನೋತ್ಸವಕ್ಕಿಂತ ಸಮಾಜ ಜಾಗೃತಿ ಮುಖ್ಯ : ಆರ್‌ಎಸ್‌ಎಸ್ ತನ್ನ ಶತಮಾನೋತ್ಸವವನ್ನು ಆಚರಿಸುವ ಬದಲು, ಸಮಾಜದಲ್ಲಿ ಜಾಗೃತಿ ಮೂಡಿಸಲು ಹಿಂದೂ ಸಂಗಮಗಳಂತಹ ಕಾರ್ಯಕ್ರಮಗಳು ಜನರೇ ಸ್ವಯಂಪ್ರೇರಿತವಾಗಿ ನಡೆಯುತ್ತಿರುವುದು ವಿಶೇಷ ಎಂದು ಅವರು ಹೇಳಿದರು.ಒಂದು ಕಾಲದಲ್ಲಿ “ನಾನು ಹಿಂದೂ” ಎಂದು ಹೇಳಲು ಹಿಂಜರಿದಿದ್ದ ಸಮಾಜಕ್ಕೆ ಆತ್ಮವಿಶ್ವಾಸ ತುಂಬಿ, ಸಂಘಟನೆ ಶಕ್ತಿಯನ್ನು ನೀಡಿದ್ದು ರಾಷ್ಟ್ರೀಯ ಸ್ವಯಂಸೇವಕ ಸಂಘವೇ ಎಂದು ಅವರು ಪ್ರಕಟಿಸಿದರು.

ಪಂಚಪರಿವರ್ತನೆಯ ಮೂಲಕ ಸಮಾಜ ಜಾಗೃತಿ : ಇದು ಪರಿವರ್ತನೆಯ ಯುಗವಾಗಿದೆ, ವ್ಯಕ್ತಿ–ಕುಟುಂಬ–ಸಮಾಜ ಮಟ್ಟದಲ್ಲಿ ಜಾಗೃತಿಯಾಗಬೇಕು ಉದ್ದೇಶದಿಂದ ಸಂಘವು ಪಂಚಪರಿವರ್ತನೆ ಕಾರ್ಯಗಳನ್ನು ಕೈಗೊಂಡಿದೆ. ಕುಟುಂಬ ಪ್ರಬೋಧನ, ಸ್ವದೇಶಿ ಅಭಿಯಾನ, ಪರಿಸರ ಸಂರಕ್ಷಣೆ, ಸಾಮಾಜಿಕ ಸಾಮರಸ್ಯ ಮತ್ತು ನಾಗರಿಕ ಶಿಷ್ಟಾಚಾರ ಇವುಗಳ ಮೂಲಕ ಸಮಾಜದಲ್ಲಿ ಬದಲಾವಣೆ ತರಲು ಪ್ರಯತ್ನಿಸುತ್ತಿದೆ ಎಂದು ಹೇಳಿದರು.

ಮಕ್ಕಳಲ್ಲಿ ಸಂಸ್ಕಾರ ಬೆಳೆಸುವ ಕುರಿತು ಕಾರ್ಯಕ್ರಮದಲ್ಲಿ ಮಾತನಾಡಿದ ಲೋಹಿತಾಶ್ವ ಕೇದಿಗ್ಗೆರೆ, ಮಕ್ಕಳಿಗೆ ಬಾಲ್ಯದಲ್ಲಿಯೇ ಸನಾತನ ಸಂಸ್ಕೃತಿಯ ಮೌಲ್ಯಗಳನ್ನು ಪರಿಚಯಿಸಬೇಕು ಎಂದು ಹೇಳಿದರು. ಸಂಪ್ರದಾಯದಂತೆ ಹುಟ್ಟುಹಬ್ಬದ ಆಚರಣೆ, ಸ್ವದೇಶಿ ವಸ್ತ್ರಧಾರಣೆ ಇವುಗಳ ಬಗ್ಗೆ ನೆನಪಿಸಿಕೊಳ್ಳಲು ಅವರ ಸಲಹೆ ಅಭಿಪ್ರಾಯಗಳು ಅಭಿಪ್ರಾಯ ವ್ಯಕ್ತಪಡಿಸಿದ ಅವರು, ಮಕ್ಕಳಿಗೆ ನೈಜ ಇತಿಹಾಸವನ್ನು ತಿಳಿಯುವ ಅಗತ್ಯವಿದೆ ಎಂದು ಹೇಳಿದರು.ಕಾರ್ಯಕ್ರಮದ ವೈಶಿಷ್ಟ್ಯಗಳುಹಿಂದೂ ಸಂಗಮ ಆಯೋಜನಾ ಸಮಿತಿ ಅಧ್ಯಕ್ಷ ವಿನಯ್ ವಿ.ಎಂ. ಮಾತನಾಡಿ, ಹೊಸನಗರ ತಾಲೂಕಿನ ಅಂತಿಮ ಸಂಗಮ ಕಾರ್ಯಕ್ರಮ ಇದಾಗಿದ್ದು, ಇಡೀ ತಾಲೂಕಿನಲ್ಲಿ ಈ ಕಾರ್ಯಕ್ರಮಗಳು ಯಶಸ್ವಿಯಾಗಿ ನಡೆದಿವೆ ಎಂದು ತಿಳಿಸಿದರು ಸಂಘಟನೆ ಹೇಳಿದರು.ಕಾರ್ಯಕ್ರಮದ ಅಂಗವಾಗಿ ನಡೆದ ಬೃಹತ್ ಶೋಭಾಯಾತ್ರೆಯಲ್ಲಿ ಕುಣಿತ ಭಜನೆ, ಮಕ್ಕಳ ಛದ್ಮವೇಷ, ಡೊಳ್ಳು ಕುಣಿತ ಗಮನ ಸೆಳೆಯಿತು. ರಂಗೋಲಿ, ಪ್ರಬಂಧ ಹಾಗೂ ಛದ್ಮವೇಷ ಸ್ಪರ್ಧೆಯಲ್ಲಿ ಭಾಗವಹಿಸಿದವರಿಗೆ ಬಹುಮಾನ ವಿತರಿಸಲಾಯಿತು. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜನಮನ ಗೆದ್ದವು.ಸಾಮಾಜಿಕ ಸೇವೆಯಲ್ಲಿ ತೊಡಗಿರುವ ನಾಗೇಶ್ ಪೈ, ಸುಬ್ರಮಣ್ಯ ಮತ್ತು ಸುರೇಂದ್ರ ಗೌಡ್ರು ಅವರನ್ನು ಸನ್ಮಾನಿಸಲಾಯಿತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅನಂತ್ ಹೆಚ್.ಕೆ ವಹಿಸಿದ್ದರು. ಅಭಿಷೇಕ್, ವಿನಾಯಕ, ಕಿರಣ್, ನಾಗೇಂದ್ರ, ಯದು, ವೃಷಭೇಂದ್ರ, ನಟೇಶ್, ಸಂಜಯ, ಜಗದೀಶ್, ಪರ್ವತಣ್ಣ, ಶ್ರೀಧರ್, ಚರಣ್ ಸೇರಿದಂತೆ ಅನೇಕರು ಇದ್ದಾರೆ.

ವರದಿ : ಕೆರೇಹಳ್ಳಿ ಅಂಜನ್

  • malnadsuddi36@gmail.com

    ಮಲ್ನಾಡ್ ಸುದ್ದಿ ಇದು ಕೇವಲ ಸುದ್ದಿ ವಾಹಿನಿಯಲ್ಲ ಮಲ್ನಾಡ್ ಸುದ್ದಿ ಇದು ಮಲೆನಾಡ ಜನರ ಧ್ವನಿ ಜನರೊಂದಿಗೆ ಸೇರಿ ಅನ್ಯಾಯದ ವಿರುದ್ಧ ಹೋರಾಡುವುದು ನಮ್ಮ ಮಲ್ನಾಡ್ ಸುದ್ದಿ ತಂಡ ನೈಜ್ಯ ಅಪರಾಧ. ಪ್ರಸ್ತುತ ರಾಜಕೀಯ. ಕ್ರೀಡೆ. ಸಾಂಸ್ಕೃತಿಕ ಕಾರ್ಯಕ್ರಮ. ಅನ್ಯಾಯದ ವಿರುದ್ಧ ಹೋರಾಟ. ಉಚಿತ ಕಾನೂನು ಸಲಹೆ. ಸಿನಿಮಾ ಸ್ಟೋರಿಗಳು. ಸರ್ಕಾರದ ಅನುದಾನಗಳ ಬಗ್ಗೆ ಸಮಗ್ರ ಮಾಹಿತಿ. ಒಟ್ಟಾರೆಯಾಗಿ ಸಮಾಜವನ್ನು ಸುಧಾರಿಸುವುದು ನಮ್ಮ ಮಲ್ನಾಡ್ ಸುದ್ದಿ ತಂಡದ ಗುರಿ

    Related Posts

    ಬಾವಿ ಅನುದಾನದ ಹಣ ಇದ್ದರೂ ಗ್ರಾಮಸ್ಥರಿಂದ 60000 ಹಣ ವಸೂಲಿ:

    Despite the government releasing funds for the construction of a well in Kudumallige Gram Panchayat limits of Thirthahalli taluk, money has been collected from the villagers ತೀರ್ಥಹಳ್ಳಿ : ತಾಲೂಕಿನ ಕುಡುಮಲ್ಲಿಗೆ…

    ಶಿವಮೊಗ್ಗ ಹಿಂದುಳಿದ ವರ್ಗಗಳ ಕುರುವಳ್ಳಿ ನಾಗರಾಜ್ ಪ್ರಧಾನ ಕಾರ್ಯದರ್ಶಿ ಆಗಿ ಆಯ್ಕೆ:

    Shivamogga: Kuruvalli Nagaraj has been appointed as the General Secretary of the Shivamogga District Congress Backward Classes (Youth Wing) unit. ಶಿವಮೊಗ್ಗ: ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗಗಳ (ಯುವ ಸಂಘಟನೆ) ಘಟಕದ ಪ್ರಧಾನ…

    Leave a Reply

    Your email address will not be published. Required fields are marked *

    You Missed

    ಬಾವಿ ಅನುದಾನದ ಹಣ ಇದ್ದರೂ ಗ್ರಾಮಸ್ಥರಿಂದ 60000 ಹಣ ವಸೂಲಿ:

    ಶಿವಮೊಗ್ಗ ಹಿಂದುಳಿದ ವರ್ಗಗಳ ಕುರುವಳ್ಳಿ ನಾಗರಾಜ್ ಪ್ರಧಾನ ಕಾರ್ಯದರ್ಶಿ ಆಗಿ ಆಯ್ಕೆ:

    ಚಿನ್ನ ಕಳವು ಆರೋಪಿ ಬಂಧನ 30 ಗ್ರಾಂ ಚಿನ್ನದ ಗಟ್ಟಿ ಪೊಲೀಸರ ವಶಕ್ಕೆ

    ಫೇಸ್ಬುಕ್ ಇನ್ಸ್ಟಾಗ್ರಾಮ್ ಮೂಲಕ ಹನಿ ಟ್ರ್ಯಾಪ್ ಪ್ಯಾಷನ್ ಡಿಸೈನರ್ ಬಂಧನ:

    ಟ್ರಾಕ್ಟರ್ ಪಲ್ಟಿ: ಬಾಲಕ ಸ್ಥಳದಲ್ಲೇ ಸಾವು

    ಹನಿ ಟ್ರಾಪ್. ಆರೋಪಿ ಗಳ ಬಂಧನ