ರಾಜೇಶ್ ಹಿರೇಮನೆ ಪ್ರಕರಣದಲ್ಲಿ ವಕೀಲ ವಾಲೆ ಮನೆ ಶಿವಕುಮಾರ ಸ್ಪಷ್ಟನೆ

ನಗರ: ಇತ್ತೀಚೆಗೆ ನ್ಯಾಯಾಂಗ ಬಂಧನಕ್ಕೆ ಒಳಗಾಗಿದ್ದ ರಾಜೇಶ್ ಹಿರೇಮನೆ ಅವರಿಗೆ ಜಾಮೀನು ತಿರಸ್ಕಾರವಾಗಿದೆ ಎಂಬ ಸುದ್ದಿ ಕೆಲ ಮಾಧ್ಯಮಗಳಲ್ಲಿ ಪ್ರಸಾರವಾಗಿರುವ ಕುರಿತು ಅವರ ಪರ ವಕೀಲರಾದ ವಾಲೆ ಮನೆ ಶಿವಕುಮಾರ ಸ್ಪಷ್ಟನೆ ನೀಡಿದ್ದಾರೆ.ನಿನ್ನೆ ದಿನ ನ್ಯಾಯಾಲಯವು ರಾಜೇಶ್ ಹಿರೇಮನೆ ಅವರನ್ನು ಒಂದು ದಿನದ ಅವಧಿಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತ್ತು. ಆದರೆ ಹೊಸರ ತಾಲೂಕಿನ ತೋಷಿಲ್ ಮೀಡಿಯಾ ಸುದ್ದಿ ಮಾಧ್ಯಮದಲ್ಲಿ ಜಾಮೀನು ಅರ್ಜಿ ತಿರಸ್ಕಾರವಾಗಿದೆ ಎಂದು ವರದಿ ಪ್ರಕಟಿಸಲಾಗಿತ್ತು.
https://youtube.com/watch?v=3W-g322d298&feature=shared
ಈ ಕುರಿತು ಪ್ರತಿಕ್ರಿಯಿಸಿದ ವಕೀಲರು, ಇದು ಸಂಪೂರ್ಣ ತಪ್ಪು ಮಾಹಿತಿ ಎಂದು ತಿಳಿಸಿದ್ದಾರೆ.“ನ್ಯಾಯಾಲಯವು ಸರ್ಕಾರಿ ವಕೀಲರ ತಕರಾರಿಗೆ ಅವಕಾಶ ನೀಡುವ ಉದ್ದೇಶದಿಂದ ವಿಚಾರಣೆಯನ್ನು ಮುಂದೂಡಿತ್ತು. ಜಾಮೀನು ಅರ್ಜಿ ತಿರಸ್ಕಾರವಾಗಿಲ್ಲ. ಇಂದಿನ ದಿನ ನ್ಯಾಯಾಲಯದಲ್ಲಿ ಜಾಮೀನು ಅರ್ಜಿಯ ವಿಚಾರಣೆ ನಡೆದು, ರಾಜೇಶ್ ಹಿರೇಮನೆ ಅವರಿಗೆ ಜಾಮೀನು ಮಂಜೂರಾಗಿದೆ,” ಎಂದು ವಾಲೆ ಮನೆ ಶಿವಕುಮಾರ ತಿಳಿಸಿದ್ದಾರೆ.ಇದಲ್ಲದೆ, ಕೆಲ ಮಾಧ್ಯಮಗಳಲ್ಲಿ ‘ಶಾಸಕರ ಆಪ್ತ ಸಹಾಯಕ’ ಎಂಬ ಪದಗಳನ್ನು ವಿಶೇಷವಾಗಿ ಹೈಲೈಟ್ ಮಾಡಿ ಸುದ್ದಿ ಬಿತ್ತರಿಸಿರುವುದು ಸರಿಯಲ್ಲ ಎಂದು ಅವರು ಅಭಿಪ್ರಾಯಪಟ್ಟರು. “ರಾಜೇಶ್ ಅವರು ಶಾಸಕರ ಆಪ್ತ ಸಹಾಯಕ ಆಗುವುದಕ್ಕೂ ಮುನ್ನದಿಂದಲೇ ಸುಮಾರು ಇಪ್ಪತ್ತು ವರ್ಷಗಳಿಂದ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ಒಬ್ಬ ಉತ್ತಮ ಕಾರ್ಯಕರ್ತರು. ಅವರ ವ್ಯಕ್ತಿತ್ವವನ್ನು ತಪ್ಪಾಗಿ ಚಿತ್ರಿಸುವ ಪ್ರಯತ್ನ ನಡೆಯಬಾರದು,” ಎಂದು ಹೇಳಿದರು.ಹಳೆಯ ಒಂದೂವರೆ ವರ್ಷದ ದೂರಿಗೆ ಸಂಬಂಧಿಸಿದ ವಿಚಾರಣೆಯ ಹಿನ್ನೆಲೆಯಲ್ಲಿ ಅವರು ನ್ಯಾಯಾಂಗ ಬಂಧನಕ್ಕೆ ಒಳಗಾಗಿದ್ದರು. ಇದೀಗ ನ್ಯಾಯಾಲಯ ಜಾಮೀನು ಮಂಜೂರು ಮಾಡಿದ ಹಿನ್ನೆಲೆಯಲ್ಲಿ ಅವರು ಬಿಡುಗಡೆಗೊಂಡಿದ್ದಾರೆ.
by ಕೆರೇಹಳ್ಳಿ ಅಂಜನ್