ಗಂಡ-ಮಕ್ಕಳನ್ನು ಬಿಟ್ಟು ಅನ್ಯಕೋಮಿನ ವ್ಯಕ್ತಿಯೊಂದಿಗೆ ಬೆಂಗಳೂರಿಗೆ ತೆರಳಿದ್ದ ಮಹಿಳೆ ಸಾವು; ಕರ್ನಾಟಕದಲ್ಲಿ ಮತ್ತೊಂದು ‘ಲವ್ ಜಿಹಾದ್’ ಆರೋಪ?”

ಇಳಕಲ್ ಮಹಿಳೆ ಸಾವಿನ ಪ್ರಕರಣ: ಆರೋಪಿ ಬಂಧನಕ್ಕೆ ಆಗ್ರಹ

ಇಳಕಲ್ ಮೂಲದ ವಿವಾಹಿತ ಹಿಂದೂ ಮಹಿಳೆ ಅಕ್ಷತಾ ಅವರ ಸಾವಿನ ಪ್ರಕರಣ ರಾಜ್ಯಾದ್ಯಂತ ಚರ್ಚೆಗೆ ಗ್ರಾಸವಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಗಣಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಆರೋಪಿ ಎಂದು ಆರೋಪಿಸಲಾಗಿರುವ ನಾನಾ ಸಾಬ್‌ನ ಪತ್ತೆಗಾಗಿ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆ.

ದೂರಿನ ಪ್ರಕಾರ, ಪ್ರೀತಿ-ಪ್ರೇಮದ ಹೆಸರಿನಲ್ಲಿ ಅಕ್ಷತಾಳನ್ನು ಕುಟುಂಬದಿಂದ ದೂರ ಮಾಡಿಸಿ ಬೆಂಗಳೂರಿಗೆ ಕರೆತಂದು, ಕಳೆದ ಮೂರು ವರ್ಷಗಳಿಂದ ಲೈಂಗಿಕ ದೌರ್ಜನ್ಯ ಎಸಗುವುದರ ಜೊತೆಗೆ ಇಸ್ಲಾಂ ಧರ್ಮಕ್ಕೆ ಮತಾಂತರವಾಗುವಂತೆ ಕಿರುಕುಳ ನೀಡಲಾಗಿದೆ ಎಂದು ಆರೋಪಿಸಲಾಗಿದೆ. ಅಲ್ಲದೆ, ಕಳೆದ ವಾರ ಮಹಿಳೆಯನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ ಎಂಬ ಆರೋಪವೂ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಈ ಘಟನೆಗೆ ಸಂಬಂಧಿಸಿದಂತೆ ವಿವಿಧ ಹಿಂದೂಪರ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಪ್ರಕರಣದ ಸಮಗ್ರ ತನಿಖೆ ನಡೆಸಿ ಆರೋಪಿಯನ್ನು ಶೀಘ್ರ ಬಂಧಿಸಿ ಕಾನೂನು ಪ್ರಕಾರ ಕಠಿಣ ಶಿಕ್ಷೆಗೆ ಒಳಪಡಿಸಬೇಕು ಎಂದು ಆಗ್ರಹಿಸಿವೆ.

ಪ್ರಕರಣದ ತನಿಖೆಯನ್ನು ಜಿಗಣಿ ಪೊಲೀಸರು ಮುಂದುವರಿಸಿದ್ದು, ತನಿಖೆಯ ನಂತರವೇ ಘಟನೆಯ ಸಂಪೂರ್ಣ ಸತ್ಯಾಂಶ ಹೊರಬರಬೇಕಿದೆ.

  • Anjan Kerehalli

    ಮಲ್ನಾಡ್ ಸುದ್ದಿ ಎಕ್ಸ್ಪ್ರೆಸ್ – ನಮ್ಮ ಧ್ವನಿ, ನಿಮ್ಮ ಹಕ್ಕು ಮಲ್ಲಾಡ್ ಸುದ್ದಿ ಎಕ್ಸ್ಪ್ರೆಸ್ ದು ಮಲೆನಾಡ ಜನರ ಧ್ವನಿ “ನಮ್ಮ ಮಲ್ನಾಡ್ ಸುದ್ದಿ ಎಕ್ಸ್ಪ್ರೆಸ್ – ಜನರೊಂದಿಗೆ, ಜನರಿಗಾಗಿ.”

    Related Posts

    ಉಡಾನ್ 6.0 ಟೆಂಡರ್‌ನಲ್ಲಿ ಶಿವಮೊಗ್ಗ ವಿಮಾನ ನಿಲ್ದಾಣ ಸೇರ್ಪಡೆ.!

    ಶಿವಮೊಗ್ಗ: ಮಲೆನಾಡಿನ ಜನರ ಬಹುದಿನಗಳ ನಿರೀಕ್ಷೆಗೆ ಮತ್ತೊಮ್ಮೆ ಬಲ ಬಂದಿದ್ದು, ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಪ್ರಾದೇಶಿಕ ವಿಮಾನಯಾನ ಯೋಜನೆಯಾದ ಉಡಾನ್ 6.0 ಟೆಂಡರ್ ಪ್ರಕ್ರಿಯೆಯಲ್ಲಿ ಶಿವಮೊಗ್ಗ ವಿಮಾನ ನಿಲ್ದಾಣ ಸೇರ್ಪಡೆಯಾಗಿದೆ. ಇದರಿಂದ ಶಿವಮೊಗ್ಗ ಸೇರಿದಂತೆ ಮಲೆನಾಡು ಭಾಗದ ಜನರಿಗೆ ಮುಂದಿನ ದಿನಗಳಲ್ಲಿ…

    ಕುವೆಂಪು ವಿಶ್ವವಿದ್ಯಾಲಯದಲ್ಲಿ ಅಂಕಪಟ್ಟಿ ಗೊಂದಲ, ಪರೀಕ್ಷಾ ವಿಳಂಬ; ವಿದ್ಯಾರ್ಥಿಗಳ ಸಮಸ್ಯೆ ಖಂಡಿಸಿ ನ.30ಕ್ಕೆ ಬಿಜೆಪಿ ಪ್ರತಿಭಟನೆ – ಕುಕ್ಕೆ ಪ್ರಶಾಂತ್

    ಶಿವಮೊಗ್ಗ: ಕುವೆಂಪು ವಿಶ್ವವಿದ್ಯಾಲಯದಲ್ಲಿ ಅಂಕಪಟ್ಟಿ ವಿತರಣೆಯಲ್ಲಿನ ಗೊಂದಲ, ಪರೀಕ್ಷೆಗಳ ವಿಳಂಬ, ಮೌಲ್ಯಮಾಪನದಲ್ಲಿನ ಲೋಪ ಸೇರಿದಂತೆ ವಿದ್ಯಾರ್ಥಿಗಳು ಎದುರಿಸುತ್ತಿರುವ ವಿವಿಧ ಶೈಕ್ಷಣಿಕ ಸಮಸ್ಯೆಗಳನ್ನು ಖಂಡಿಸಿ ನವೆಂಬರ್ 30ರಂದು ಬಿಜೆಪಿ ಯುವ ಮೋರ್ಚಾ ವತಿಯಿಂದ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ ಎಂದು ಬಿಜೆಪಿ ಯುವ ಮೋರ್ಚಾ…

    Leave a Reply

    Your email address will not be published. Required fields are marked *

    You Missed

    ಉಡಾನ್ 6.0 ಟೆಂಡರ್‌ನಲ್ಲಿ ಶಿವಮೊಗ್ಗ ವಿಮಾನ ನಿಲ್ದಾಣ ಸೇರ್ಪಡೆ.!

    ಕುವೆಂಪು ವಿಶ್ವವಿದ್ಯಾಲಯದಲ್ಲಿ ಅಂಕಪಟ್ಟಿ ಗೊಂದಲ, ಪರೀಕ್ಷಾ ವಿಳಂಬ; ವಿದ್ಯಾರ್ಥಿಗಳ ಸಮಸ್ಯೆ ಖಂಡಿಸಿ ನ.30ಕ್ಕೆ ಬಿಜೆಪಿ ಪ್ರತಿಭಟನೆ – ಕುಕ್ಕೆ ಪ್ರಶಾಂತ್

    ತಮಿಳಿನ ಜನಪ್ರಿಯ ‘ಸೂಪರ್ ಸಿಂಗರ್’ ವೇದಿಕೆಗೆ ಹೊಸನಗರದ ಅಭಿಜಿತ್ ರಾವ್ ಆಯ್ಕೆ!

    ಮುಖ್ಯ ಸಚೇತಕರಾಗಿ ಆಯ್ಕೆಯಾದ ಶಾಸಕ ಬೇಳೂರು ಗೋಪಾಲಕೃಷ್ಣ ಅವರಿಗೆ ಅಭಿನಂದನೆಗಳ ಮಹಾಪೂರ…!

    ಮುಖ್ಯ ಸಚೇತಕರಾಗಿ ಆಯ್ಕೆಯಾದ ಶಾಸಕ ಬೇಳೂರು ಗೋಪಾಲಕೃಷ್ಣ ಅವರಿಗೆ ಅಭಿನಂದನೆಗಳ ಮಹಾಪೂರ…!

    ರಿಪ್ಪನ್‌ಪೇಟೆಯಲ್ಲಿ ನವವಿವಾಹಿತೆ ಅಪಹರಣದ ಆರೋಪ! ಎರಡು ಕಾರುಗಳಲ್ಲಿ ಬಂದು ಮನೆಗೆ ನುಗ್ಗಿ ಹಲ್ಲೆ ನಡೆಸಿದ ಆರೋಪ

    ರಿಪ್ಪನ್‌ಪೇಟೆಯಲ್ಲಿ ನವವಿವಾಹಿತೆ ಅಪಹರಣದ ಆರೋಪ! ಎರಡು ಕಾರುಗಳಲ್ಲಿ ಬಂದು ಮನೆಗೆ ನುಗ್ಗಿ ಹಲ್ಲೆ ನಡೆಸಿದ ಆರೋಪ

    ರಾಷ್ಟ್ರ ಪ್ರಶಸ್ತಿ ವಿಜೇತ ಶಿಕ್ಷಕಿ ರತ್ನಕುಮಾರಿಗೆ SBI ಗೌರವ | ಹೊಸನಗರ | Malnad Suddi Express