ಮಂಗಳೂರು ವಿದ್ಯುಚ್ಛಕ್ತಿ ಸರಬರಾಜು ಕಂಪನಿ (MESCOM) ಪ್ರಕಟಣೆ ಪ್ರಕಾರ, 33 ಕೆವಿ ಸಾಗರ–ಹೊಸನಗರ ವಿದ್ಯುತ್ ಮಾರ್ಗದಲ್ಲಿ ಕಡಿತಲೆ ಪ್ರಯುಕ್ತ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ. ಅರಣ್ಯ ಇಲಾಖೆಯ ಸಹಯೋಗದಲ್ಲಿ ವಿದ್ಯುತ್ ಮಾರ್ಗಕ್ಕೆ ತಾಗುವ ಮರಗಳ ಮೇಲ್ಭಾಗ (ತರಗೋ ಮೇಲೆ ಭಾಗ) ಮಾತ್ರ ಕಡಿತ ಮಾಡುವ ಕಾರ್ಯ ನಡೆಯಲಿದೆ.ಈ ಹಿನ್ನೆಲೆಯಲ್ಲಿ ಬೆಳಿಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ವಿದ್ಯುತ್ ಸರಬರಾಜು ವ್ಯತ್ಯಯವಾಗಲಿದೆ.ಈ ಅವಧಿಯಲ್ಲಿ ಹೊಸನಗರ ಟೌನ್ ಸೇರಿದಂತೆ ಜೇನಿ, ಹರಿದ್ರಾವತಿ, ಹರತಾಳು, ಪುರಪ್ಪೆಮನೆ, ಮಾರುತೀಪುರ, ರಾಮಚಂದ್ರಾಪುರ ಮಠ, ಮೇಲಿನ ಬೆಸಿಗೆ, ಸೋನಲೆ, ಎಂ.ಗುಡ್ಡೆಕೊಪ್ಪ, ಕರಿಂಗೊಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪ್ರದೇಶಗಳು ವಿದ್ಯುತ್ ವ್ಯತ್ಯಯಕ್ಕೆ ಒಳಗಾಗಲಿವೆ ಎಂದು ತಿಳಿಸಲಾಗಿದೆ.ಹೊಸನಗರ ಉಪವಿಭಾಗದ ಗ್ರಾಹಕರು ಸಹಕರಿಸುವಂತೆ MESCOM ಅಧಿಕಾರಿಗಳು ಮನವಿ ಮಾಡಿದ್ದಾರೆ.

By Anjan Kerehalli

ಮಲ್ನಾಡ್ ಸುದ್ದಿ ಎಕ್ಸ್ಪ್ರೆಸ್ – ನಮ್ಮ ಧ್ವನಿ, ನಿಮ್ಮ ಹಕ್ಕು ಮಲ್ಲಾಡ್ ಸುದ್ದಿ ಎಕ್ಸ್ಪ್ರೆಸ್ ದು ಮಲೆನಾಡ ಜನರ ಧ್ವನಿ “ನಮ್ಮ ಮಲ್ನಾಡ್ ಸುದ್ದಿ ಎಕ್ಸ್ಪ್ರೆಸ್ – ಜನರೊಂದಿಗೆ, ಜನರಿಗಾಗಿ.”

Leave a Reply

Your email address will not be published. Required fields are marked *