ರಿಪ್ಪನಪೇಟೆ: ರಿಪ್ಪನಪೇಟೆ–ತೀರ್ಥಹಳ್ಳಿ ಮುಖ್ಯ ರಸ್ತೆಯಲ್ಲಿ ಒಂದು ಹಣದ ಮೊತ್ತ ಪತ್ತೆಯಾಗಿದೆ. ಈ ಹಣವನ್ನು ರಾಕೇಶ್ ರವರಿಗೆ ದೊರೆತಿರುತ್ತದೆ.
ಹಣವನ್ನು ಯಾರು ಕಳೆದುಕೊಂಡಿದ್ದಾರೆ ಎಂಬುದು ರಾಕೇಶ್ ಅವರಿಗೆ ತಿಳಿದಿಲ್ಲ. ಬೈಕ್ ನಲ್ಲಿ ಹೋಗುವವರು ಯಾರಾದರೂ ಈ ಹಣವನ್ನು ಕಳೆದುಕೊಂಡಿರಬಹುದು ಎಂದು ಶಂಕಿಸಲಾಗಿದೆ.
ಈ ಕುರಿತು ರಾಕೇಶ್ ಅವರು ಮಲ್ನಾಡ್ ಸುದ್ದಿ ವಾಹಿನಿಗೆ ಮಾಹಿತಿ ನೀಡಿ, “ಯಾರು ಹಣ ಕಳೆದುಕೊಂಡಿದ್ದಾರೋ ಅವರು ತಮ್ಮ ನಿಜವಾದ ಮತ್ತು ಸರಿಯಾದ ವಿವರಗಳನ್ನು ನೀಡಿ ಹಣವನ್ನು ವಾಪಸ್ ಪಡೆದುಕೊಳ್ಳಲಿ” ಎಂದು ಮನವಿ ಮಾಡಿದ್ದಾರೆ.
ಹಣಕ್ಕೆ ಸಂಬಂಧಿಸಿದ ಎಲ್ಲಾ ಮಾಹಿತಿ ರಾಕೇಶ್ ಅವರ ಬಳಿ ಲಭ್ಯವಿದೆ. ತೀರ್ಥಹಳ್ಳಿ ಮುಖ್ಯ ರಸ್ತೆಯಲ್ಲಿ ಹಣ ಕಳೆದುಕೊಂಡಿರುವವರು ತಕ್ಷಣ ರಾಕೇಶ್ ಅವರನ್ನು ಸಂಪರ್ಕಿಸುವಂತೆ ವಿನಂತಿಸಲಾಗಿದೆ.
📞 ಸಂಪರ್ಕ ಸಂಖ್ಯೆ: 9731687346
ಈ ಸಂದರ್ಭದಲ್ಲಿ ಪ್ರಾಮಾಣಿಕವಾಗಿ ಹಣವನ್ನು ಕಾಪಾಡಿ ನಿಜವಾದ ಮಾಲೀಕರಿಗೆ ಹಿಂತಿರುಗಿಸಲು ಮುಂದಾಗಿರುವ ರಾಕೇಶ್ ಅವರ ಉತ್ತಮ ಕಾರ್ಯಕ್ಕೆ ಮಲ್ನಾಡ್ ಸುದ್ದಿ ಬಳಗದಿಂದ ಅಭಿನಂದನೆಗಳನ್ನು ಸಲ್ಲಿಸಲಾಗಿದೆ.

ವರದಿ: ಗಣೇಶ್ ರಿಪ್ಪನ್ ಪೇಟೆ

By Anjan Kerehalli

ಮಲ್ನಾಡ್ ಸುದ್ದಿ ಎಕ್ಸ್ಪ್ರೆಸ್ – ನಮ್ಮ ಧ್ವನಿ, ನಿಮ್ಮ ಹಕ್ಕು ಮಲ್ಲಾಡ್ ಸುದ್ದಿ ಎಕ್ಸ್ಪ್ರೆಸ್ ದು ಮಲೆನಾಡ ಜನರ ಧ್ವನಿ “ನಮ್ಮ ಮಲ್ನಾಡ್ ಸುದ್ದಿ ಎಕ್ಸ್ಪ್ರೆಸ್ – ಜನರೊಂದಿಗೆ, ಜನರಿಗಾಗಿ.”

Leave a Reply

Your email address will not be published. Required fields are marked *