ಆನೆಗದ್ದೆ ರಸ್ತೆ ಸರ್ಕಾರಿ ಶಾಲೆ ನವೀಕರಣ: ಮಾದರಿ ಶಿಕ್ಷಣ ಕೇಂದ್ರವಾಗಿ ರೂಪಾಂತರ

Posted by

ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ಆನೆಗದ್ದೆ ರಸ್ತೆ ಸರ್ಕಾರಿ ಶಾಲೆ ಇದೀಗ ನವೀಕರಣ ಹಾಗೂ ಸುಂದರೀಕರಣದ ಮೂಲಕ ಹೊಸ ರೂಪ ಪಡೆದುಕೊಂಡಿದೆ. ರಿವರ್ಬೇಡ್ ಟೆಕ್ನಾಲಜಿ ಇಂಡಿಯಾ ಸಂಸ್ಥೆಯ ಸಹಕಾರ ಮತ್ತು ಚಾಲುಕ್ಯ ಫೌಂಡೇಶನ್‌ನ ಅನುಷ್ಠಾನದಲ್ಲಿ ಈ ಮಹತ್ವದ ಕಾರ್ಯ ಯಶಸ್ವಿಯಾಗಿ ನೆರವೇರಿದೆ.ಈ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಶಾಲೆ ಸಂಪೂರ್ಣವಾಗಿ ಆಕರ್ಷಕವಾಗಿ ರೂಪಾಂತರಗೊಂಡಿದ್ದು, ಯಾವುದೇ ಖಾಸಗಿ ಶಾಲೆಗೆ ಕಡಿಮೆಯಿಲ್ಲದಂತೆ ಸೌಲಭ್ಯಗಳನ್ನು ಹೊಂದಿದೆ. ಶಾಲೆಯ ಮೇಲ್ಚಾವಣಿ ದುರಸ್ತಿ, ಹೊಸ ಕಿಟಕಿಗಳ ಅಳವಡಿಕೆ, ಶೌಚಾಲಯ ಸುಧಾರಣೆ, ಅಡುಗೆಮನೆಗೆ ಸ್ಲಾಬ್ ಹಾಗೂ ಟೈಲ್ಸ್ ಕೆಲಸ, ಹ್ಯಾಂಡ್‌ವಾಷ್ ವ್ಯವಸ್ಥೆ ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಅಭಿವೃದ್ಧಿಪಡಿಸಲಾಗಿದೆ.ಇದಲ್ಲದೆ, ಎಲ್ಲಾ ತರಗತಿ ಕೊಠಡಿಗಳಲ್ಲಿ ವಿದ್ಯುತ್ ವ್ಯವಸ್ಥೆ ರಿಪೇರಿ ಮಾಡಿ ಹೊಸ ಟ್ಯೂಬ್ ಲೈಟ್ ಹಾಗೂ ಫ್ಯಾನ್‌ಗಳನ್ನು ಅಳವಡಿಸಲಾಗಿದೆ. ಶಾಲೆಗೆ ಆಕರ್ಷಕ ಬಣ್ಣ ಹಚ್ಚಿ, ಗೋಡೆಗಳ ಮೇಲೆ ವರ್ಲಿ ಕಲಾಕೃತಿಗಳನ್ನು

ಮೂಡಿಸಲಾಗಿದೆ. ವಿದ್ಯಾರ್ಥಿಗಳಿಗಾಗಿ ಡೆಸ್ಕ್‌ಗಳು, ಟೈ-ಬೆಲ್ಟ್, ಕ್ರೀಡಾ ಉಡುಪುಗಳು, ಕ್ರೀಡಾ ಸಾಮಗ್ರಿಗಳು ಹಾಗೂ ಲೈಬ್ರರಿ ರ್ಯಾಕ್‌ಗಳನ್ನು ಒದಗಿಸಲಾಗಿದೆ. ಶಿಕ್ಷಕರಿಗೆ ಟೇಬಲ್ ಹಾಗೂ ಕುರ್ಚಿಗಳ ವ್ಯವಸ್ಥೆಯೂ ಮಾಡಲಾಗಿದೆ.ಒಟ್ಟು ₹5,90,801 ವೆಚ್ಚದಲ್ಲಿ ಈ ಯೋಜನೆ ಪೂರ್ಣಗೊಂಡಿದ್ದು, ಸಂಸ್ಥೆಯ ನೆರವು ಶಾಲೆಯ ಅಭಿವೃದ್ಧಿಗೆ ಮಹತ್ತರ ಪಾತ್ರವಹಿಸಿದೆ. ರಿವರ್ಬೇಡ್ ಸಂಸ್ಥೆಯ ಮೇಘನಾ ಕುಮಾರ್ ಅವರ ಸೇವೆಯನ್ನು ಇದೇ ವೇಳೆ ಕೃತಜ್ಞತೆಯಿಂದ ಸ್ಮರಿಸಲಾಯಿತು.ಕಾರ್ಯಕ್ರಮದಲ್ಲಿ ಚಾಲುಕ್ಯ ಫೌಂಡೇಶನ್‌ನ ಹರೀಶ್ ಬಾಬು, CSR ಲೀಡರ್ ಚಿನ್ಮಯ್ ಹಾಗೂ ಮೇಘನಾ ಚಿನ್ಮಯ್ ಭಾಗವಹಿಸಿದ್ದರು. ಆನೆಗದ್ದೆ ರಸ್ತೆ ಶಾಲೆ ಹಾಗೂ ರಸ್ತೆ ವಿಶೇಷವಾಗಿ ಆಯ್ಕೆ ಮಾಡಲೂ ಕಾರಣ ಇಲ್ಲಿನ ಶಾಲೆಯ ಶಿಕ್ಷಕಿಯರಾದ ಕುಮಾರಿ ಶುತಿ ಮತ್ತು ಅವರ ಬೆಂಬಲಿಸಿ ನಿಂತ ಸಹೋದ್ಯೋಗಿ ಶಿಕ್ಷಕರಾದ ನವೀನ್, ಶ್ರೀಮತಿ ಆಪ್ರಿನ್ ಅಥಿಥಿ ಶಿಕ್ಷಕರಾದ ಶ್ರೀಮತಿ ಅನುಷಾ, ಅಡುಗೆ ಸಿಬ್ಬಂದಿಗಳಾದ ಜ್ಯೋತಿ ಹಾಗೂ ವಿದ್ಯಾ. ಇವರಿಗೆ ಇರುವ ಕಾಳಜಿ ಪ್ರೀತಿ ಸರ್ಕಾರಿ ಶಾಲೆಯ ಎಲ್ಲಾ ಶಿಕ್ಷಕರಿಗೆ ಬಂದರೆ ಸರ್ಕಾರಿ ಶಾಲೆಗಳು ಎಲ್ಲ ಖಾಸಗಿ ಶಾಲೆಗಳಿಗೆ ಪೈಪೋಟಿ ನೀಡಬಹುದಾಗಿದೆ..ಹಾಗೆ ನಮ್ಮ ಕೆಲಸಗಳಿಗೆ ಪೂರ್ಣ ಸಹಕಾರ ನೀಡಿದ ಶಾಲೆಯ ಎಸ್ ಡಿ ಎಂ ಸಿ ಯ ಸದಸ್ಯರಾದ ಸುರೇಶ್ ಎ ಆರ್ ಹಾಗೂ ಅಧ್ಯಕ್ಷರಾದ ಹರೀಶ್ ಅವರಿಗೂ ಹಾಗೂ ಎಲ್ಲಾ ಸಹೃದಯ ಪೋಷಕ ಮಿತ್ರರಿಗೂ ನಾವು ಸದಾ ಕೃತಜ್ಞರು.

ಸಮರ್ಪಣಾ ಮನೋಭಾವವೇ ಈ ಶಾಲೆಯನ್ನು ಆಯ್ಕೆಮಾಡಲು ಪ್ರಮುಖ ಕಾರಣವಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಸುರೇಶ್ ಎ.ಆರ್ ಹಾಗೂ ಪೋಷಕರ ಸಹಕಾರಕ್ಕೂ ಸಂಘಟಕರು ಧನ್ಯವಾದ ತಿಳಿಸಿದ್ದಾರೆ.“ಸರ್ಕಾರಿ ಶಾಲೆಗಳು ಉಳಿಯಬೇಕು, ಗ್ರಾಮೀಣ ಬಡ ಮಕ್ಕಳಿಗೆ ಉತ್ತಮ ಶಿಕ್ಷಣ ಸಿಗಬೇಕು” ಎಂಬ ಉದ್ದೇಶದೊಂದಿಗೆ ನಡೆದ ಈ ಕಾರ್ಯ ಎಲ್ಲರಿಂದ ಪ್ರಶಂಸೆಗೆ ಪಾತ್ರವಾಗಿದೆ.

ವರದಿ : ಗಣೇಶ್ ರಿಪ್ಪನ್ ಪೇಟೆ

Leave a Reply

Your email address will not be published. Required fields are marked *