ರಿಪ್ಪನ್ ಪೇಟೆ ಸಮೀಪದ ಕೊಳವಳ್ಳಿ ಗ್ರಾಮದಲ್ಲಿ ಯುವಕನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಗುರುವಾರ ವರದಿಯಾಗಿದೆ.ಮೃತ ಯುವಕನನ್ನು ಕೊಳವಳ್ಳಿ ಗ್ರಾಮದ ಸುನೀಲ್ ಬಿನ್ ವೀರಭದ್ರ (23) ಎಂದು ಗುರುತಿಸಲಾಗಿದೆ. ಬುಧವಾರ ಸಂಜೆ ಕೆಲಸ ಮುಗಿಸಿಕೊಂಡು ಮನೆಗೆ ಬಂದ ಸುನೀಲ್, ನಂತರ ಸ್ನೇಹಿತನ ಮನೆಗೆ ಹೋಗುವುದಾಗಿ ಹೇಳಿ ಸುಮಾರು 5 ಗಂಟೆಗೆ ಹೊರಟಿದ್ದನು. ರಾತ್ರಿ 11 ಗಂಟೆಗೆ ಮನೆಗೆ ವಾಪಸ್ಸು ಬಂದಿದ್ದಾನೆ. ಈ ವೇಳೆ ಅವನು ಮದ್ಯಪಾನ ಮಾಡಿದ್ದನೆಂದು ತಿಳಿದುಬಂದಿದೆ.ಮನೆಗೆ ಬಂದ ನಂತರ ತಂದೆ-ತಾಯಿಯವರೊಂದಿಗೆ ಮಾತನಾಡಿ, ಮನೆಯ ಹೊರಭಾಗದ ಜಗುಲಿಯಲ್ಲಿ ಕೆಲಕಾಲ ಕುಳಿತಿದ್ದಾನೆ. ಬಳಿಕ ತಂದೆ ಮಲಗಲು ತೆರಳಿದ ನಂತರ, ಸುನೀಲ್ ಮನೆಯೊಳಗೆ ಹೋಗಿದ್ದಾನೆ. ಇದೇ ವೇಳೆ ಹೊರಗೆ ಮಾತನಾಡುತ್ತಿದ್ದ ಅಣ್ಣ ಸುಮಂತ್ ಹಾಗೂ ತಾಯಿ ಸುಮಾರು 11:30ರ ವೇಳೆಗೆ ಒಳಗೆ ಹೋಗಿ ನೋಡಿದಾಗ, ಮನೆಯ ಹಾಲ್‌ನಲ್ಲಿದ್ದ ಕಬ್ಬಿಣದ ರಾಡಿಗೆ ನೈಲಾನ್ ಬೆಡ್‌ಶೀಟ್ ಬಳಸಿ ನೇಣು ಬಿಗಿದುಕೊಂಡಿರುವುದು ಕಂಡುಬಂದಿದೆ.ತಕ್ಷಣವೇ ಕೆಳಗಿಳಿಸಿ ಪಕ್ಕದ ಮನೆಯವರ ಸಹಾಯದಿಂದ ರಿಪ್ಪನ್ ಪೇಟೆ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ವೈದ್ಯರು ಪರಿಶೀಲಿಸಿದ ಬಳಿಕ ಮೃತಪಟ್ಟಿರುವುದಾಗಿ ದೃಢಪಡಿಸಿದ್ದಾರೆ.ಕುಟುಂಬದವರ ಪ್ರಕಾರ, ಸುನೀಲ್ ಹೆಚ್ಚು ಮದ್ಯಪಾನ ಮಾಡುತ್ತಿದ್ದುದರಿಂದ ಮಾನಸಿಕವಾಗಿ ಅಸ್ವಸ್ಥನಾಗಿದ್ದನು ಎಂದು ತಿಳಿದುಬಂದಿದೆ. ಇನ್ನು, ಆತ ಒಬ್ಬ ಉತ್ತಮ ಕಬಡ್ಡಿ ಕ್ರೀಡಾಪಟುವಾಗಿದ್ದನೆಂಬ ಮಾಹಿತಿ ಲಭ್ಯವಾಗಿದೆ.ಈತನ ಸಾವಿನ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಈ ಸಂಬಂಧ ರಿಪ್ಪನ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.

ವರದಿ : ಕೆರೆಹಳ್ಳಿ ಅಂಜನ್ Kolavalli suicide caseRipponpet youth suicideSunil Veerabhadra deathKarnataka village suicide newsKabaddi player suicideYouth hanging case KarnatakaAlcohol addiction suicide caseShivamogga district newsRipponpet police caseRural Karnataka tragedy

By Anjan Kerehalli

ಮಲ್ನಾಡ್ ಸುದ್ದಿ ಎಕ್ಸ್ಪ್ರೆಸ್ – ನಮ್ಮ ಧ್ವನಿ, ನಿಮ್ಮ ಹಕ್ಕು ಮಲ್ಲಾಡ್ ಸುದ್ದಿ ಎಕ್ಸ್ಪ್ರೆಸ್ ದು ಮಲೆನಾಡ ಜನರ ಧ್ವನಿ “ನಮ್ಮ ಮಲ್ನಾಡ್ ಸುದ್ದಿ ಎಕ್ಸ್ಪ್ರೆಸ್ – ಜನರೊಂದಿಗೆ, ಜನರಿಗಾಗಿ.”

Leave a Reply

Your email address will not be published. Required fields are marked *