ಗ್ಯಾಸ್ ಸಿಲಿಂಡರ್ ಕೊರತೆ: ಹೋಟೆಲ್ ಮಾಲೀಕರ ಸಭೆ ಸೇವೆ ನಿರಂತರಕ್ಕೆ ನಿರ್ಧಾರ:

Posted by

ಹೊಸನಗರ: ಗ್ಯಾಸ್ ಸಿಲಿಂಡರ್ ಕೊರತೆಯಿಂದ ಹೋಟೆಲ್ ಉದ್ಯಮಕ್ಕೆ ಎದುರಾಗುತ್ತಿರುವ ಸಂಕಷ್ಟವನ್ನು ಎದುರಿಸುವ ಕುರಿತು ಹೊಸನಗರದ ವರ್ತಕರ ಸಂಘ(ರಿ.) ಹಾಗೂ ಹೋಟೆಲ್ ಮಾಲೀಕರ ಸಂಘದ ನೇತೃತ್ವದಲ್ಲಿ ಹೋಟೆಲ್ ಮಾಲೀಕರ ಸಭೆ ನಡೆಯಿತು.ಸಭೆಯಲ್ಲಿ ಗ್ಯಾಸ್ ಕೊರತೆಯ ನಡುವೆಯೂ ಯಾವುದೇ ಕಾರಣಕ್ಕೂ ಹೋಟೆಲ್‌ಗಳನ್ನು ಬಂದ್ ಮಾಡದೇ, ಪರ್ಯಾಯವಾಗಿ ಸೌದೆ ಒಲೆಗಳನ್ನು ಬಳಸಿಕೊಂಡು ಕಡಿಮೆ ಮೆನು ಆಹಾರ ಪದಾರ್ಥಗಳನ್ನು ಸಿದ್ಧಪಡಿಸಿ ಹೋಟೆಲ್‌ಗಳನ್ನು ನಿರ್ವಹಿಸುವಂತೆ ತೀರ್ಮಾನಿಸಲಾಯಿತು. ಇದೇ ವೇಳೆ ದೇಶದ ಈ ಕಠಿಣ ಪರಿಸ್ಥಿತಿಯಲ್ಲಿ ಜನರಿಗೆ ಅಗತ್ಯವಿರುವ ನೀರು ಹಾಗೂ ಆಹಾರವನ್ನು ಒದಗಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದು ಸಭೆಯಲ್ಲಿ ಒಮ್ಮತ ವ್ಯಕ್ತವಾಯಿತು.ಸಭೆಯಲ್ಲಿ ವರ್ತಕರ ಸಂಘದ ಅಧ್ಯಕ್ಷ ಪೂರ್ಣೇಶ್ ಮಲೇಬೈಲ್, ಪ್ರಾಂತೀಯ ಹೋಟೆಲ್ ಮಾಲೀಕರ ಸಂಘ ಸಾಗರದ ಸದಸ್ಯ ನಿಖಿಲ್ ಪ್ರಭಾಕರ್ ಸೇರಿದಂತೆ ಹೊಸನಗರದ ಹೋಟೆಲ್ ಮಾಲೀಕರು ಉಪಸ್ಥಿತರಿದ್ದರು.

ವರದಿ : ವಿಠಲ್ ರಾವ್ ಹೊಸನಗರ

Leave a Reply

Your email address will not be published. Required fields are marked *