ಕುಮಟಾ: ಹಾಡು ಹಗಲೇ ಮನೆ ಕಳ್ಳತನ ಲಕ್ಷಾಂತರ ಮೌಲ್ಯದ ಚಿನ್ನ ಹಾಗೂ ನಗದು ದೋಚಿಕೆ :

Posted by

An incident took place on March 16 when thieves broke into a house in Lower Koojalli,Koojalli village of the taluk,in the afternoon and stole gold ornaments and cash worth lakhs of rupees.

ಕುಮಟಾ : ತಾಲೂಕಿನ ಕೂಜಳ್ಳಿ ಗ್ರಾಮದ ಕೆಳಗಿನ ಕೂಜಳ್ಳಿಯಲ್ಲಿ ಮಧ್ಯಾಹ್ನ ಸಮಯದಲ್ಲೇ ಕಳ್ಳರು ಮನೆಗೆ ನುಗ್ಗಿ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ ನಗದು ಕಳವು ಮಾಡಿದ ಘಟನೆ ಮಾ.16ರಂದು ನಡೆದಿದೆ.
ಕೂಲಿ ಕೆಲಸ ಮಾಡುತ್ತಿರುವ ಚಂದ್ರಕಾಂತ ಸುಕ್ರು ಗೌಡ ಅವರ ಮನೆಯನ್ನು ಗುರಿಯಾಗಿಸಿಕೊಂಡ ಕಳ್ಳರು, ಬೆಳಿಗ್ಗೆ 9.30ರಿಂದ 11.30ರ ಅವಧಿಯಲ್ಲಿ ಮನೆ ಖಾಲಿ ಇರುವುದನ್ನು ಗಮನಿಸಿ ಕೃತ್ಯ ಎಸಗಿದ್ದಾರೆ. ಮನೆಯ ಹಿಂಭಾಗದ ಸಿಮೆಂಟ್ ಶೀಟ್ ಬಾಗಿಲನ್ನು ಒಡೆದು ಒಳನುಗ್ಗಿದ ದುಷ್ಕರ್ಮಿಗಳು, ನಂತರ ಒಳಗಿನ ಬಾಗಿಲನ್ನೂ ಮುರಿದು ದೇವರ ಕೋಣೆಯಲ್ಲಿ ಇಟ್ಟಿದ್ದ ಬ್ಯಾಗ್‌ನ್ನು ಕದ್ದೊಯ್ದಿದ್ದಾರೆ.
ಕಳುವಾದ ವಸ್ತುಗಳಲ್ಲಿ ಸುಮಾರು 20 ಗ್ರಾಂ ತೂಕದ ದೊಡ್ಡ ಬಂಗಾರದ ಮಾಂಗಲ್ಯ ಸರ (ಅಂದಾಜು ₹2 ಲಕ್ಷ), 10 ಗ್ರಾಂ ತೂಕದ ಮತ್ತೊಂದು ಮಾಂಗಲ್ಯ ಸರ (₹1 ಲಕ್ಷ) ಹಾಗೂ ₹15ರಿಂದ ₹20 ಸಾವಿರದ ನಗದು ಸೇರಿವೆ. ಒಟ್ಟಾರೆ ₹3 ಲಕ್ಷಕ್ಕೂ ಅಧಿಕ ಮೌಲ್ಯದ ವಸ್ತುಗಳು ಕಳುವಾಗಿವೆ ಎಂದು ಅಂದಾಜಿಸಲಾಗಿದೆ.
ಈ ಸಂಬಂಧ ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚಿಸಿ ಶೋಧ ಕಾರ್ಯ ಮುಂದುವರಿದಿದೆ.

ವರದಿ : ಗಣೇಶ್ ರಿಪ್ಪನ್ ಪೇಟೆ

Leave a Reply

Your email address will not be published. Required fields are marked *