ರಿಪ್ಪನ್ ಪೇಟೆಯಲ್ಲಿ ಲಾರಿ ಹಾಗೂ ಕಾರು ಅಪಘಾತ

Posted by

ರಿಪ್ಪನಪೇಟೆ: ಪಟ್ಟಣದ ರಿಪ್ಪನಪೇಟೆ ವೃತ್ತದಲ್ಲಿ ಗುರುವಾರ ಬೆಳಿಗ್ಗೆ ರಸ್ತೆ ಅಪಘಾತದಲ್ಲಿ ಲಾರಿ ಮತ್ತು ಎರ್ಟಿಗಾ ಕಾರು ಮುಖಾಮುಖಿ ಡಿಕ್ಕಿಯಾಗಿವೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಮಾಹಿತಿ ಪ್ರಕಾರ, ಹೊಸನಗರ ರಸ್ತೆಯಿಂದ ಬಂದ ಲಾರಿ ವೃತ್ತ ಪ್ರವೇಶಿಸುವ ವೇಳೆ, ಸಾಗರದಿಂದ ತೀರ್ಥಹಳ್ಳಿ ಕಡೆಗೆ ಸಾಗುತ್ತಿದ್ದ ಎರ್ಟಿಗಾ ಕಾರಿನೊಂದಿಗೆ ಡಿಕ್ಕಿಯಾಗಿದೆ.

ಡಿಕ್ಕಿಯ ಪರಿಣಾಮ ಕಾರಿನ ಮುಂಭಾಗ ಭಾಗಶಃ ಜಖಂಗೊಂಡಿದ್ದು, ಲಾರಿಗೆ ಸಣ್ಣ ಹಾನಿಯಾಗಿದೆ.
ಅಪಘಾತದಲ್ಲಿ ಕಾರಿನಲ್ಲಿದ್ದ ಪ್ರಯಾಣಿಕರಿಗೆ. ಸಣ್ಣಪುಟ್ಟ ಗಾಯಗಳಾಗಿದ್ದು, ಸ್ಥಳೀಯರು ತಕ್ಷಣವೇ ನೆರವಿಗೆ ಧಾವಿಸಿ ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಘಟನೆಯ ಪರಿಣಾಮ ಕೆಲಕಾಲ ವಾಹನ ಸಂಚಾರ ಅಸ್ತವ್ಯಸ್ತಗೊಂಡಿದ್ದು, ಬಳಿಕ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ವಾಹನಗಳನ್ನು ತೆರವುಗೊಳಿಸಿ ಸಂಚಾರವನ್ನು ಸುಗಮಗೊಳಿಸಿದರು. ರಿಪ್ಪನ್ ಪೇಟೆ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ

ವರದಿ ಗಣೇಶ್ ರಿಪ್ಪನ್ ಪೇಟೆ

Leave a Reply

Your email address will not be published. Required fields are marked *