ರಿಪ್ಪನಪೇಟೆಯ ಗಾಂಧಿ ನಗರದಲ್ಲಿ ಹೋಳಿ ಹುಣ್ಣಿಮೆ ಹಬ್ಬವನ್ನು ಸಂಪ್ರದಾಯಬದ್ಧವಾಗಿ ಹಾಗೂ ಸಂಭ್ರಮದಿಂದ ಆಚರಿಸಲಾಯಿತು. ನಿನ್ನೆ ರಾತ್ರಿ ಸುಮಾರು 10:30 ಗಂಟೆಗೆ ಗಾಂಧಿ ನಗರದಲ್ಲಿ ಕಾಮಣನನ್ನು ಪ್ರತಿಷ್ಠಾಪಿಸಿ ನಂತರ ಸಂಪ್ರದಾಯದಂತೆ ಕಾಮಣನನ್ನು ಸುಡಲಾಯಿತು. ಪ್ರತಿವರ್ಷದಂತೆ ಈ ವರ್ಷವೂ ಕೂಡ ಗಾಂಧಿ ನಗರದಲ್ಲಿ ಯುವಕರು, ಗ್ರಾಮಸ್ಥರು ಮತ್ತು ಸಾರ್ವಜನಿಕರು ಸೇರಿ ಘೋಷಣೆಗಳನ್ನು ಕೂಗುತ್ತಾ ಕಾಮಣನನ್ನು ಸುಟ್ಟು ಹಬ್ಬವನ್ನು ಆಚರಿಸಿದರು.

ಹಬ್ಬದ ವಾಡಿಕೆಯಂತೆ ಪ್ರತಿಯೊಂದು ಮನೆಯಲ್ಲಿಗೂ ತೆರಳಿ ಕಟ್ಟಿಗೆ ಹಾಗೂ ಎಣ್ಣೆಯನ್ನು ಸಂಗ್ರಹಿಸಿ ಕಾಮಣನನ್ನು ಸಿದ್ಧಪಡಿಸಲಾಗುತ್ತದೆ. ನಂತರ ರಾತ್ರಿ ಕಾಮಣನನ್ನು ಸುಡುವ ಮೂಲಕ ಹೋಳಿ ಹಬ್ಬಕ್ಕೆ ಚಾಲನೆ ನೀಡಲಾಗುತ್ತದೆ. ಮಾರನೆಯ ದಿನ ಬೆಳಿಗ್ಗೆ ಗ್ರಾಮಸ್ಥರು ಹಾಗು ಸಾರ್ವಜನಿಕರು ಸೇರಿ ಹೋಳಿ ಆಡುತ್ತ ಪರಸ್ಪರ ಬಣ್ಣ ವನ್ನ ಹೊಚ್ಚಿಕೊಂಡು ಹಬ್ಬವನ್ನು ಸಂಭ್ರಮದಿಂದ ಆಚರಿಸುವ ಪದ್ಧತಿ ಇದೆ.

ಹೋಳಿ ಹಬ್ಬವು ಹಿಂದೆ ಮಲೆನಾಡು ಭಾಗದ ಹಲವೆಡೆ ಸಂಭ್ರಮದಿಂದ ನಡೆಯುತ್ತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಈ ಸಂಪ್ರದಾಯ ನಿಧಾನವಾಗಿ ಕಡಿಮೆಯಾಗುತ್ತಿರುವುದು ಬೇಸರದ ಸಂಗತಿಯಾಗಿದೆ. ಕೆಲ ವರ್ಷಗಳ ಹಿಂದೆ ರಿಪ್ಪನಪೇಟೆಯ ಬಹುತೇಕ ಎಲ್ಲಾ ಭಾಗಗಳಲ್ಲೂ ಹೋಳಿ ಹಬ್ಬವನ್ನು ಆಚರಿಸಲಾಗುತ್ತಿತ್ತು. ಆದರೆ ಈಗ ಕೇವಲ ಕೆಲವೇ ಪ್ರದೇಶಗಳಲ್ಲಿ ಮಾತ್ರ ಈ ಹಬ್ಬ ನಡೆಯುತ್ತಿದೆ.ಆದರೆ ಗಾಂಧಿ ನಗರದಲ್ಲಿನ ಜನರು ತಮ್ಮ ಪೂರ್ವಜರಿಂದ ಬಂದ ಸಂಪ್ರದಾಯವನ್ನು ಇಂದಿಗೂ ಕಾಪಾಡಿಕೊಂಡು ಹೋಳಿ ಹುಣ್ಣಿಮೆಯನ್ನು ಆಚರಿಸುತ್ತಿರುವುದು ವಿಶೇಷವಾಗಿದೆ. ಪ್ರತಿವರ್ಷವೂ ಗಾಂಧಿ ನಗರದಲ್ಲಿ ಹೋಳಿ ಹಬ್ಬವು ಸಂಭ್ರಮದಿಂದ ನಡೆಯುತ್ತಿದ್ದು, ಸ್ಥಳೀಯರ ಸಂಪ್ರದಾಯ ಪ್ರೀತಿಯನ್ನು ತೋರಿಸುತ್ತದೆ.

ವರದಿ : ಕೆರೆಹಳ್ಳಿ ಅಂಜನ್

By Anjan Kerehalli

ಮಲ್ನಾಡ್ ಸುದ್ದಿ ಎಕ್ಸ್ಪ್ರೆಸ್ – ನಮ್ಮ ಧ್ವನಿ, ನಿಮ್ಮ ಹಕ್ಕು ಮಲ್ಲಾಡ್ ಸುದ್ದಿ ಎಕ್ಸ್ಪ್ರೆಸ್ ದು ಮಲೆನಾಡ ಜನರ ಧ್ವನಿ “ನಮ್ಮ ಮಲ್ನಾಡ್ ಸುದ್ದಿ ಎಕ್ಸ್ಪ್ರೆಸ್ – ಜನರೊಂದಿಗೆ, ಜನರಿಗಾಗಿ.”

Leave a Reply

Your email address will not be published. Required fields are marked *