ರಿಪ್ಪನ್ ಪೇಟೆ: ರಿಪ್ಪನ್ ಪೇಟೆ ಬಿಜೆಪಿ ಅಭಿಮಾನಿ ಬಳಗದ ವತಿಯಿಂದ ನಿನ್ನೆ ಸಂಜೆ ಮಹಾಶಕ್ತಿ ಕೇಂದ್ರದ ನೂತನ ಅಧ್ಯಕ್ಷರಾದ ಸುಂದರೇಶ್ ಕೆರೆಹಳ್ಳಿ ಹಾಗೂ ಪ್ರಧಾನ ಕಾರ್ಯದರ್ಶಿಯಾದ ಜಿ.ಡಿ. ಮಲ್ಲಿಕಾರ್ಜುನ್ ಅವರಿಗೆ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಈ ಸಂದರ್ಭದಲ್ಲಿ ಹೊಸನಗರ ತಾಲೂಕು ಮಂಡಲ ಅಧ್ಯಕ್ಷರಾದ ಎನ್. ಸತೀಶ್ ಅವರನ್ನೂ ಆತ್ಮೀಯವಾಗಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಪಕ್ಷದ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಭಾಗವಹಿಸಿ ನೂತನ ಪದಾಧಿಕಾರಿಗಳಿಗೆ ಅಭಿನಂದನೆಗಳು ದೇವರಾಜ್ ಕೆರೆಹಳ್ಳಿ, ಮೆಣಸೆ ಆನಂದ್, ಗಣೇಶ್ ಕರಡಿಗ, ಚಂದ್ರಣ್ಣ, ವೈ.ಸಂತೋಷ್, ಮಹಮದ್ ಹುಸೇನ್, ಮಂಜುನಾಥ ಆಚಾರ್, ರಾಘವೇಂದ್ರ (ಪಾಪಣ್ಣ), ರವಿ,ಸಂಜು ಕೆಂಚನಾಳ , ಪದ್ಮ ಸುರೇಶ್, ರೇಖಾ ರವಿ, ನಾಗರತ್ನ ದೇವರಾಜ್ ಸೀತಮ್ಮ, ಗೀತಾ ಕರಿಬಸಪ್ಪ ಸೇರಿದಂತೆ ಕಾರ್ಯಕ್ರಮವು ಸ್ನೇಹಪೂರ್ಣ ವಾತಾವರಣದಲ್ಲಿ. ನೂತನ ಪದಾಧಿಕಾರಿಗಳು ಪಕ್ಷದ ಬಲವರ್ಧನೆಗೆ ತಮ್ಮ ಶ್ರಮವನ್ನು ಅರ್ಪಿಸುವುದಾಗಿ ಭರವಸೆ ನೀಡಿದ್ದಾರೆ.

ವರದಿ : ಕೆರೆಹಳ್ಳಿ ಅಂಜನ್

By Anjan Kerehalli

ಮಲ್ನಾಡ್ ಸುದ್ದಿ ಎಕ್ಸ್ಪ್ರೆಸ್ – ನಮ್ಮ ಧ್ವನಿ, ನಿಮ್ಮ ಹಕ್ಕು ಮಲ್ಲಾಡ್ ಸುದ್ದಿ ಎಕ್ಸ್ಪ್ರೆಸ್ ದು ಮಲೆನಾಡ ಜನರ ಧ್ವನಿ “ನಮ್ಮ ಮಲ್ನಾಡ್ ಸುದ್ದಿ ಎಕ್ಸ್ಪ್ರೆಸ್ – ಜನರೊಂದಿಗೆ, ಜನರಿಗಾಗಿ.”

Leave a Reply

Your email address will not be published. Required fields are marked *