ರಿಪ್ಪನ್ ಪೇಟೆ: ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ನಡೆದ ಉಗ್ರ ದಾಳಿಯಲ್ಲಿ ಹುತಾತ್ಮರಾದ ವೀರ ಯೋಧರ ಸ್ಮರಣಾರ್ಥವಾಗಿ ರಿಪ್ಪನ್ ಪೇಟೆಯಲ್ಲಿ ಭಾವಪೂರ್ಣವಾಗಿ ಪುಷ್ಪ ನಮನ ಸಲ್ಲಿಸಲಾಯಿತು.

ಕಾಶ್ಮೀರದ ಪುಲ್ವಾಮಾದಲ್ಲಿ ನಡೆದ ಉಗ್ರರ ದಾಳಿಯಲ್ಲಿ ಹುತಾತ್ಮರಾದ ವೀರ ಯೋಧರ ಸ್ಮರಣಾರ್ಥವಾಗಿ ರಿಪ್ಪನ್ ಪೇಟೆಯಲ್ಲಿ ಭಾವಪೂರ್ಣವಾಗಿ ಪುಷ್ಪ ನಮನ ಸಲ್ಲಿಸಲಾಯಿತು.ಹುತಾತ್ಮಯೋಧರ ಭಾವಚಿತ್ರಗಳನ್ನು ಒಳಗೊಂಡ ಬ್ಯಾನರ್‌ಗಳಿಗೆ ಪುಷ್ಪ ಹಾರ ಹಾಕಿ, ಭಾರತದ ನಕ್ಷೆ ಬಿಡಿಸಿ ಅದರ ಸುತ್ತ ದೀಪ ಬೆಳಗಿ ಹಾಗೂ ಹೂವಿನ ಅಲಂಕಾರ ಮಾಡಿ ಗೌರವ ಸೂಚಿಸಲಾಯಿತು. ಕಾರ್ಯಕ್ರಮದಲ್ಲಿ ದೇಶಭಕ್ತಿ ಘೋಷಣೆಗಳು ಮೊಳಗಿದವು.ಈ ಕಾರ್ಯಕ್ರಮವನ್ನು ಹಿಂದೂ ಜಾಗರಣ ವೇದಿಕೆ ಮತ್ತು ಸಾರ್ವಜನಿಕರು ಸೇರಿ ನಡೆಸಲಾಯಿತು ಯೋಧರಿಗೆ ಗೌರವ ನಮನ ಸಲ್ಲಿಸಿದರು.ಕಾರ್ಯಕ್ರಮದಲ್ಲಿ. ರಿಪ್ಪನ್ ಪೇಟೆಯ ಬಿಜೆಪಿ ಮಹಿಳಾ ಪ್ರಮುಖರು ಹಾಗೂ ಸ್ಥಳೀಯ ಮಹಿಳಾ ಕಾರ್ಯಕರ್ತರು ಆಗಮಿಸಿ ಹುತಾತ್ಮರವರಿಗೆ ಪುಷ್ಪಾರ್ಚನೆ ಮಾಡಿದರು .ಹುತಾತ್ಮಯೋಧರ ತ್ಯಾಗವನ್ನು ಸದಾ ಸ್ಮರಿಸಬೇಕು ಹಾಗೂ ದೇಶದ ಭದ್ರತೆಗೆ ಅವರ ಕೊಡುಗೆ ಅಳಿಯದಂತದ್ದು ಎಂದು ಈ ಸಂದರ್ಭದಲ್ಲಿ ಭಾಷಣ ಮಾಡಿದರು ಅಭಿಪ್ರಾಯಪಟ್ಟರು.

ವರದಿ : ಕೆರೆಹಳ್ಳಿ ಅಂಜನ್↑

By Anjan Kerehalli

ಮಲ್ನಾಡ್ ಸುದ್ದಿ ಎಕ್ಸ್ಪ್ರೆಸ್ – ನಮ್ಮ ಧ್ವನಿ, ನಿಮ್ಮ ಹಕ್ಕು ಮಲ್ಲಾಡ್ ಸುದ್ದಿ ಎಕ್ಸ್ಪ್ರೆಸ್ ದು ಮಲೆನಾಡ ಜನರ ಧ್ವನಿ “ನಮ್ಮ ಮಲ್ನಾಡ್ ಸುದ್ದಿ ಎಕ್ಸ್ಪ್ರೆಸ್ – ಜನರೊಂದಿಗೆ, ಜನರಿಗಾಗಿ.”

Leave a Reply

Your email address will not be published. Required fields are marked *